ದೊಡ್ಡಬಳ್ಳಾಪುರ : ಕುವೈತ್ ನಿಂದ ಜೂನ್ 2 ರಂದು ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ, ಐವರು ಪ್ರಯಾಣಿಕರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಎಲ್ಲರೂ ಹೊರ ಜಿಲ್ಲೆಯವರಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.
ಸೋಂಕಿತ ಐವರು ವ್ಯಕ್ತಿಗಳು, ಉಡುಪಿ ಜಿಲ್ಲೆಯ 33 ವರ್ಷದ ಮಹಿಳೆ (ಪಿ-5316), ಬೆಂಗಳೂರು ನಗರ ಜಿಲ್ಲೆಯ 49 ವರ್ಷದ ಮಹಿಳೆ (ಪಿ-5317), ಹಾಸನ ಜಿಲ್ಲೆಯ 40 ವರ್ಷದ ಪುರುಷ (ಪಿ-5318), ದಕ್ಷಿಣ ಕನ್ನಡ ಜಿಲ್ಲೆಯ 26 ವರ್ಷದ ಪುರುಷ (ಪಿ-5319) ಹಾಗೂ ಕೋಲಾರ ಜಿಲ್ಲೆಯ 37 ವರ್ಷದ ಮಹಿಳೆ (ಪಿ-5320) ಆಗಿದ್ದಾರೆ.
ಎಲ್ಲಾ ಸೋಂಕಿತ ವ್ಯಕ್ತಿಗಳು ವರದಿ ಬರುವ ಮುನ್ನ ದೇವನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಕ್ವಾರಂಟೈನ್ ನಲ್ಲಿರಿಸಿದ್ದು,ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)