ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜ್ಞಾನ ವಿಕಾಸ ಕೇಂದ್ರ ನಿರ್ವಹಣೆ ಮಾಡುವ ಸಂಯೋಜಕರಿಗೆ ಮಹಿಳಾ ಸಬಲೀಕರಣದ ಕುರಿತು ತರಬೇತಿ ಕಾರ್ಯಾಗಾರ ಶನಿವಾರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾನಿರ್ವಹಣಾ ಯೋಜನಾಧಿಕಾರಿ ತಿಲಕ್ ಉದ್ಘಾಟಿಸಿದರು.ಈ ವೇಳೆ ತಾಲೂಕಿನ ಯೋಜನಾಧಿಕಾರಿ ಸುಧಾಬಾಸ್ಕರ್ ನಾಯಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಹಿತಿ ಮತ್ತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ವೇತಾ,ಜಿಲ್ಲಾ ಪ್ರಬಂಧಕಿ ಶಂಕುಲ,ಹಣಕಾಸು ಪ್ರಬಂಧಕಿ ಭಾರತೀನಾಯಕ್ ಮತ್ತಿತರಿದ್ದರು.