ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಹಳ್ಳಿಯಿಂದ ತಾಲೂಕು ಕಚೇರಿಯ ವರೆಗೆ ಹಾದು ಹೋಗಿರುವ ರಸ್ತೆಯ ಅಗಲೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು,ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಸ್ಥಳೀಯರು,ಕಳೆದ 6,7ತಿಂಗಳಿನಿಂದ ಟೋಲ್ಗೆಟ್ ರಸ್ತೆಯಿಂದ ಇಸ್ಲಾಂ ಪುರದವರೆ ರಸ್ತೆ ಅಗಲೀಕರಣವನ್ನು ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರು, ಪ್ರಯಾಣಿಕರು ಪರದಾಡುತ್ತಿದ್ದಾರೆ.
ಈ ರಸ್ತೆ ಮಧ್ಯದಲ್ಲಿ ಹಾದುಹೋಗಿರುವ ಯುಜಿಡಿ ಯೋಜನೆಯ ಚೇಂಬರ್ ನಿಂದ ತ್ಯಾಜ್ಯ ನೀರು ಕಾಮಗಾರಿ ಸ್ಥಗಿತಗೊಂಡ ಕಾರಣ, ರಸ್ತೆಯಲ್ಲಿ ಹರಿಯುತ್ತಿದ್ದು.ಎಲ್ಲೆಡೆ ವ್ಯಾಪಿಸುತ್ತಿರುವ ಕರೊನಾ ಸೋಂಕಿನ ಹಾವಳಿ ನಡುವೆ ಇತರೆ ರೋಗಗಳು ವ್ಯಾಪಿಸಬಹುದೆಂಬ ಆತಂಕ ಸ್ಥಳೀಯರದ್ದಾಗಿದೆ.
ಈ ಕುರಿತು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಗರಸಭೆ ಪೌರಾಯುಕ್ತರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಸದಸ್ಯ ಎನ್.ಕೆ.ರಮೇಶ್,ಸ್ಥಳೀಯರಾದ ಆರೀಫ್, ರಿಯಾಜ್,ಮಹಂತೇಶ್,ಅಜೀತ್,ಮಂಜುನಾಥ್,ಅಕ್ರಮ್,ಸಮೀಉಲ್ಲಾ,ದಾದಾಪೀರ್,ಶಮೀರ್ ಪಾಷಾ,ಶಬ್ಬೀರ್ ಫಾಷಾ ಮತ್ತಿತರಿದ್ದರು.
ಹತ್ತು ದಿನದ ಕಾಮಗಾರಿ ಪೂರ್ಣಗೊಳಿಸುವ ಭರವಸೆ
ಮನವಿ ಪತ್ರ ಸ್ವೀಕರಿಸಿದ ಪೌರಾಯುಕ್ತ ರಮೇಶ್ ಎಸ್.ಸುಣಗಾರ್,ಹತ್ತುದಿನದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.