ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆನ್‌ಲೈನ್ ನಲ್ಲಿ ನಡೆದ 44ನೇ ರಾಷ್ಟ್ರೀಯ ಜೂನಿಯರ್ ಮತ್ತು ಸಬ್ ಜೂನಿಯರ್ ಯೋಗಾಸನ ಸ್ಪರ್ದೆಗಳಲ್ಲಿ ಇಲ್ಲಿನ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ,ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ ಎಂದು ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಎ.ನಟರಾಜ್ ತಿಳಿಸಿದ್ದಾರೆ.
8ರಿಂದ 10 ವರ್ಷದ ಬಾಲಕಿಯರ ವಿಭಾಗ: ಆರ್.ಕುಸುಮಾಂಜಲಿ (4ನೇ ಸ್ಥಾನ )
10ರಿಂದ 12 ವರ್ಷದ ಬಾಲಕರ ವಿಭಾಗ: ಎಸ್. ಜ್ಯೇಷ್ಟ (5 ನೇ ಸ್ಥಾನ)
12ರಿಂದ 14 ವರ್ಷದ ಬಾಲಕರ ವಿಭಾಗ: ಕೆ.ವಿನಯಕುಮಾರ್ (5ನೇ ಸ್ಥಾನ)
14ರಿಂದ 16ವರ್ಷದ ಬಾಲಕರ ವಿಭಾಗ: ಎಲ್.ಎ.ಪುನೀತ (6ನೇ ಸ್ಥಾನ)ಪಡೆದಿದ್ದಾರೆ.
ಬಹುಮಾನ ವಿಜೇತರನ್ನು ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷ ಎಚ್.ಸಿ. ರವೀಂದ್ರ, ಕಾರ್ಯದರ್ಶಿ ಎ.ನಟರಾಜ್,ಖಜಾಂಚಿ ಶ್ಯಾಮ್ ಸುಂದರ್ ಅಭಿನಂದಿಸಿದ್ದಾರೆ.