ದೊಡ್ಡಬಳ್ಳಾಪುರ: ಕೊವಿಡ್–19
ಸಂಕಷ್ಟದ ಸಮಯದಲ್ಲಿಯೂ ಕೇಂದ್ರ
ಸರ್ಕಾರ ಪೆಟ್ರೋಲ್,ಡೀಸೆಲ್
ಹಾಗೂ ತೈಲ ಬೆಲೆ
ಏರಿಸಿ,ಕೇಂದ್ರ ಹಾಗೂ
ರಾಜ್ಯ ಸರ್ಕಾರಗಳ ಜನವಿರೋ
ನೀತಿ ಅನುಸರಿಸುತ್ತಿವೆ ಎಂದು
ಆರೋಪಿಸಿ ಬಿಎಸ್ಪಿ ವತಿಯಿಂದ
ತಾಲೂಕು ಕಚೇರಿ ಆವರಣದಲ್ಲಿ
ಸಾಂಕೇತಿಕ ಪ್ರತಿಭಟನೆ ನಡೆಸಿ,ಸರ್ಕಾರಕ್ಕೆ ಮನವಿ
ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ
ಬಿಎಸ್ಪಿ
ರಾಜ್ಯ ಪ್ರಧಾನ ಕಾರ್ಯದರ್ಶಿ
ಪುರುಷೋತ್ತಮ್, ಕೊವಿಡ್ ಹಿನ್ನಲೆಯ
ಲಾಕ್ಡೌನ್ನಿಂದಾಗಿ ದೇಶದ
ಬಡ ಹಾಗೂ ಮಧ್ಯಮ
ವರ್ಗದ ಜನ ಬಳಲುತ್ತಿದ್ದಾರೆ.
ಈ ನಡುವೆ ಕೇಂದ್ರ
ಸರ್ಕಾರ 20 ಲಕ್ಷ
ಕೋಟಿ ಪ್ಯಾಕೇಜ್ ನೀಡಿದ್ದು,ಬಂಡವಾಳ ಶಾಹಿಗಳ
ಪರವಾಗಿ 17 ಲಕ್ಷ
ಕೋಟಿ ನೀಡಿದೆ. ಪೆಟ್ರೋಲ್,
ಡೀಸೆಲ್ ಹಾಗೂ ತೈಲ
ಬೆಲೆಗಳನ್ನು ದಿನೇ ದಿನೇ
ಏರಿಸುತ್ತಿರುವುದು ಗಾಯದ ಮೇಲೆ
ಬರೆ ಎಳೆದಂತಾಗಿದೆ. ಇದರಿಂದ
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ
ಜನಸಾಮಾನ್ಯರಿಗೆ ಹೊರೆ ಹೆಚ್ಚಾಗುತ್ತದೆ.
ತೈಲ ಬೆಲೆ 15
ವರ್ಷಗಳದೀಂಚೆಗೆ ತೀವ್ರ ಕುಸಿತ
ಕಂಡಿದ್ದರೂ ಬೆಲೆ ಏರಿಸುತ್ತಿರುವುದು
ಜನವಿರೋ ನೀತಿಯಾಗಿದೆ.
ಈ ನಿಟ್ಟಿನಲ್ಲಿ ತೈಲ
ಬೆಲೆ ಕಡಿಮೆ ಮಾಡುವುದರೊಂದಿಗೆ
ಕೊವಿಡ್–19 ಸಂಕಷ್ಟದ
ಜನರಿಗೆ ಅನುಕೂಲ ಮಾಡಿಕೊಡಬೇಕೆಂದು
ಒತ್ತಾಯಿಸಿದರು.
ಬಿಎಸ್ಪಿ
ತಾಲೂಕು ಉಸ್ತುವಾರಿ ಕೆ.ವಿ.ಮುನಿಯಪ್ಪ.ಮುಖಂಡರಾದ ಅಂಜಿನಪ್ಪ
ನರೇಂದ್ರಮೂರ್ತಿ,ಎನ್.ಎಂ.ದಾಳಪ್ಪ.ಬಾಬಾ
ಹಾಜರಿದ್ದರು.