ದೊಡ್ಡಬಳ್ಳಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 13 ನೇ ಸ್ಥಾನ ಪಡೆದಿದ್ದು,ಶೇ.68.17ಅಂಕ ಗಳಿಕೆ ಮೂಲಕ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 9329, ಅದರಲ್ಲಿ 5836 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ಶೇ.62.56% ಫಲಿತಾಂಶ ತಂದು ಕೊಟ್ಟಿದ್ದಾರೆ.
ಇದರಲ್ಲಿ 5071ಬಾಲಕಿಯರು ಪರೀಕ್ಷೆ ತೆಗೆದುಕೊಂಡಿದ್ದು 3457 ಬಾಲಕಿಯರು ಉತ್ತೀರ್ಣರಾಗಿ ಶೇಕಡಾ 68.17 ತಮ್ಮದಾಗಿಸಿಕೊಂಡು ಮೇಲುಗೈ ಸಾಧಿಸಿದ್ದಾರೆ.
ಉಳಿದಂತೆ ಬಾಲಕರಲ್ಲಿ 4258 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,2379 ಬಾಲಕರು ಉತ್ತೀರ್ಣರಾಗಿದ್ದಾರೆ (55.87%).
ಕಲೆ ವಿಭಾಗದ1760 ವಿದ್ಯಾರ್ಥಿಗಳಲ್ಲಿ 566ಜನ ಉತ್ತೀರ್ಣರಾಗಿದ್ದಾರೆ (32.16%),ವಾಣಿಜ್ಯ ವಿಭಾಗದ 5246 ವಿದ್ಯಾರ್ಥಿಗಳಲ್ಲಿ 3501 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ (66.74%),ವಿಜ್ಞಾನ ವಿಭಾಗದ2323 ವಿದ್ಯಾರ್ಥಿಗಳಲ್ಲಿ 1769 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ( 76.15%)