ದೊಡ್ಡಬಳ್ಳಾಪುರ: ಕರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಘೋಷಿಸಿರುವ, ವಾರದ ಲಾಕ್‌ಡೌನ್ ಆರಂಭಗೊಂಡಿದ್ದು,ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಾಲೂಕಿನಲ್ಲಿ ಲಾಕ್‌ಡೌನ್ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಲಾಕ್‌ಡೌನ್ ಕಾರಣ ನಗರದಲ್ಲಿ ಅನವಶ್ಯಕವಾಗಿ ತಿರುಗುತ್ತಿರುವವರಿಗೆ ಪೊಲೀಸ್ ಇಲಾಖೆ ಸಿಬ್ಬಂದಿ ಎಚ್ಚರಿಕೆಯನ್ನು ನೀಡುತ್ತಿದ್ದು,12ರ ನಂತರ ತಾಲೂಕಿನಲ್ಲಿ ಸ್ತಬ್ಧಗೊಂಡಿದೆ.
ಉಳಿದಂತೆ ಸಮಯ 12ಗಂಟೆ ತಲುಪುತಿದ್ದಂತೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಲಾಕ್‌ಡೌನ್ ಗೆ ಬೆಂಬಲ ನೀಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನ್ಯ ರಾಜ್ಯದ ವಾಹನಗಳಿಗೆ ಕಡಿವಾಣ ಹಾಕಲು ತಾಲೂಕು ಆಡಳಿತವತಿಯಿಂದ ಗುಂಜೂರು ಹಾಗೂ ಆರೂಢಿಯಲ್ಲಿ ಚೆಕ್ ಪೊಸ್ಟ್ ಸ್ಥಾಪಿಸಿ ವಾಹನಗಳನ್ನು ತಡೆಯಲಾರಂಭಿಸಿವೆ.