ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,ಇಂದು ಸಹ ಮತ್ತೆ ಇಪ್ಪತ್ತೊಂದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಶನಿವಾರ ಬಿಡುಗಡೆ ಮಾಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಬುಲೆಟಿನಲ್ಲಿ ಇಂದು 11 ಮಂದಿ ಪುರುಷರು ಹಾಗೂ 10ಮಂದಿ ಮಹಿಳೆಯರು ಸೇರಿ ಇಪ್ಪತ್ತೊಂದು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ,ನಗರಸಭೆ ವ್ಯಾಪ್ತಿಯ ಮಂಜುನಾಥ ಲೇಔಟ್ನಲ್ಲಿ ಓರ್ವ ಮಹಿಳೆ,ರೋಜಿಪುರದ ಒಂದು ಗಂಡು,ಎಲೆಪೇಟೆಯ ಒಂದು ಗಂಡು,ಸರ್ಕಾರಿ ಆಸ್ಪತ್ರೆಯ ಕ್ವಾಟ್ರಸ್ಸಿನ ಒಂದು ಹೆಣ್ಣು,ಗ್ರಾಮಾಂತರ ಪ್ರದೇಶದ
ಕೆಸ್ತೂರಿನ ಒಂದು ಗಂಡು,ಆಲಹಳ್ಳಿಯ ಒಂದು ಹೆಣ್ಣು,ಕಸುವನಹಳ್ಳಿಯ ಆರು ಗಂಡು,ನಾಲ್ಕು ಹೆಣ್ಣು,ಬಾಶೆಟ್ಟಹಳ್ಳಿಯಲ್ಲಿ ಒಂದು ಗಂಡು,ಮೂರು ಹೆಣ್ಣು,ಬನ್ನಿಮಂಗಲದ ಓರ್ವ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಶನಿವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 171 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಆರು ಮಂದಿ ಮೃತ ಪಟ್ಟಿದ್ದರೆ,ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 47 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 112 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.