ದೊಡ್ಡಬಳ್ಳಾಪುರ: ರಾಜ್ಯಸಭೆಯ ಸಂಸದ ಎಲ್.ಹನುಮಂತಯ್ಯ ರಾಜ್ಯಸಭೆಯ ಉಪ ಸಭಾಪತಿ ಸಮಿತಿಗೆ ಆಯ್ಕೆಗೊಂಡ ಹಿನ್ನೆಲೆ, ಕಾಂಗ್ರೆಸ್ ಮುಖಂಡ ಅಪಕಾರನಹಳ್ಳಿ ಶ್ರೀನಿವಾಸ್ ನೇತೃತ್ವದ ಮುಖಂಡರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಎಲ್.ಹನುಮಂತಯ್ಯನವರನ್ನು ರಾಜ್ಯಸಭೆಯ ಉಪ ಸಭಾಪತಿಯಾಗಿ (ರಾಜ್ಯಸಭೆಯ ಉಪಾಧ್ಯಕ್ಷರ ಸಮಿತಿಗೆ) ಸಭಾಧ್ಯಕ್ಷರಾದ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ನಾಮನಿರ್ದೇಶನಗೊಳಿಸಿದ್ದರು.
ಈ ಹಿನ್ನಲ್ಲೆ ಹನುಮಂತಯ್ಯ ನಿವಾಸಕ್ಕೆ ಭೇಟಿ ನೀಡಿ ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ಅಪಕಾರನಹಳ್ಳಿ ಶ್ರೀನಿವಾಸ್,ದೊಡ್ಡಬಳ್ಳಾಪುರ ತಾಲೂಕು ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಲೋಹಿತ್, ಎನ್ ಎಸ್ ಯುಐ ಅಧ್ಯಕ್ಷ,ಅಶ್ವತ್ ರೆಡ್ಡಿ ಮತ್ತು ಸುನಿಲ್ ಇದ್ದರು.