ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ 500ರ ಗಡಿಗೆ ಬಂದಿದ್ದು,ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ ಅನ್ವಯ.ಗುರುವಾರದ ಸಂಜೆಯ ವರಗೆ 30ಮಂದಿಗೆ ಸೋಂಕು ದೃಢಪಟ್ಟಿದ್ದು,ಒಂದು ಸಾವು ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ 23 ಮಂದಿ ಗಂಡು ಹಾಗೂ 7 ಮಂದಿ ಮಹಿಳೆಯರು ಸೇರಿ ಮೂವತ್ತು ಜನರಿಗೆ ಕರೊನಾ ಸೋಂಕು ದೃಢಪಡುವ ಜೊತೆಗೆ,ಬಾಶೆಟ್ಟಹಳ್ಳಿಯ ಸುಮಾರು 49 ವರ್ಷದ ವ್ಯಕ್ತಿಯೋರ್ವರು ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯನ್ವಯ ಕೋಡಿಹಳ್ಳಿ 1, ಪಿಎಲ್ ಡಿ ಬ್ಯಾಂಕ್ 1,ದರ್ಗಾಜೋಗಹಳ್ಳಿ 3, ದೊಡ್ಡತುಮಕೂರು 1, ಬಾಶೆಟ್ಟಿಹಳ್ಳಿ 2, ಗಂಗಾಧರಪುರ 2, ಹಾದ್ರಿಪುರ 1, ತೊಟಗೆರೆ 3, ನರಸಯ್ಯನ ಅಗ್ರಹಾರ 1, ಮಾರುತಿ ನಗರ 1, ಕುಚ್ಚಪ್ಪನಪೇಟೆ 1, ಖಾಸ್ ಬಾಗ್ 3, ಕೋರ್ಟ್ ರಸ್ತೆ 1, ಸಂಜಯ ನಗರ 2, ತೇರಿನ ಬೀದಿ 1, ಖಾಸಗಿ ಕಂಪನಿ 1, ಕಸುವನಹಳ್ಳಿ 1, ಮೆಣಸಿ ಕ್ರಾಸ್ 1, ರೈಲ್ವೆ ಸ್ಟೇಷನ್ 1 ಸೇರಿದಂತೆ ತ್ಯಾಗರಾಜನಗರದ ಓರ್ವರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ತಾಲೂಕಿನಲ್ಲಿ 473 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,173 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದರೆ.16 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 36 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 248 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.