ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ಬರಗೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯನಗರ ಸಾಮ್ರಾಜ್ಯದ ವ್ಯಾಸರಾಯರು ಸ್ಥಾಪಿಸಿದರೆನ್ನಲಾಗುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಭಕ್ತರ ಆತಂಕಕ್ಕರ ಕಾರಣವಾಗಿದೆ.
ಗ್ರಾಮದ ಮಧ್ಯಲ್ಲಿರುವ ದೇವಾಲಯದ ಬಾಗಿಲು ಹಾಗು ಹುಂಡಿ ಹೊಡೆದಿರುವ ಕಳ್ಳರು.ಸುಮಾರು 50ಸಾವಿರ ಮೌಲ್ಯದ ಕಾಣಿಕೆ ಅಪಹರಿಸಿ ಪರಾರಿಯಾಗಿದ್ದಾರೆ.
ಘಟನೆ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.