ಕೋಲಾರ: ವೇಮಗಲ್‍ನ “ಸೀತಿ ಬೆಟ್ಟಕ್ಕೆ ಹಸಿರು ಹೊದಿಕೆ” ಎಂಬ ಕಾರ್ಯಕ್ರಮಕ್ಕೆ ಗಿಡಗಳನ್ನು ಹಸ್ತಾಂತರಿಸಿ ಹಾಗೂ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ಚಾಲನೆ ನೀಡಿದರು.
ನಿವೃತ್ತ IAS ಅಧಿಕಾರಿ ಅಮರನಾರಾಯಣ ರವರು ತಮ್ಮ “ಬೋಳು ಬೆಟ್ಟಕ್ಕೆ ಬನದ ಮೆರಗು” ಎಂಬ ಪರಿಕಲ್ಪನೆಯಲ್ಲಿ ಸೀತಿ ಬೆಟ್ಟದಲ್ಲಿ ವಿವಿದ ಜಾತಿಯ ಸುಮಾರು ಒಂದು ಸಾವಿರ ಗಿಡಗಳನ್ನು ನೆಡವ ಕಾರ್ಯವನ್ನು ನೆರವೇರಿಸಿ ಮಾತನಾಡಿ ಮಳೆ ಬೆಳೆ ಉತ್ತಮವಾಗಿ ಆಗಬೇಕಾದರೆ ಹಸಿರು ಮುಖ್ಯ. ಹಾಗಾಗಿ ಜಿಲ್ಲೆಯಲ್ಲಿ ಬೋಳು ಬೆಟ್ಟಗಳನ್ನು ಆಯ್ಕೆ ಮಾಡಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. PDO ಅಲ್ಲದೆ ಇದರಿಂದ ಕಾಡು ಪ್ರಾಣಿಗಳಿಗೆ ಆಹಾರದ ಜೊತೆಗೆ ವಾತಾವರಣ ತಂಪಾಗಿರಲು ಪ್ರಕೃತಿಗೆ ನಮ್ಮ ಕಿರು ಕಾಣಿಕೆಯಾಗುವ ಭರವಸೆ ಇದೆ ಎಂದರು.
ಸದ್ಯ ಪ್ರಾಯೋಗಿಕವಾಗಿ ಸೀತಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಬೆಟ್ಟದಲ್ಲಿ ಆಲ, ಬೇವು, ಕಿರುನೆಲ್ಲಿ, ಹೊಂಗೆ ಪನ್ನೇರಳೆ ಮತ್ತು ಹೊಂಗೆಯ ಗಿಡಗಳನ್ನು ನೆಡಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಪಕ್ಕದ ಭಸ್ಮಾಸುರ ಬೆಟ್ಟದಲ್ಲಿ ಗಿಡ ನೆಡುವ ಗುರಿಯ ಸಹಿತ ಜಿಲ್ಲೆಯಾದ್ಯಂತ ಬೋಳು ಬೆಟ್ಟಗಳನ್ನು ಗುರುತಿಸುವ ಕೆಲಸ ಮಾಡಲಿದ್ದೇವೆ. ಇನ್ನೂ ಬೆಟ್ಟದ ತಪ್ಪಲಿನಿಂದ ಬೆಟ್ಟದ ತುದಿಗೆ ಗಿಡ ಸಾಗಿಸಲು, ಕೋಲಾರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ, ಪಿಡಿಒ ಗಳ ಸಹಿತ ಎರಡು ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಹಲವು ಸ್ವಯಂ ಸೇವಕರು ಕೈ ಜೋಡಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಪಂಚಾಯತ್ ನ ಸಹಾಯಕ ಯೋಜನಾ ಅಧಿಕಾರಿಗಳಾದ ವಸಂತ್ ಕುಮಾರ್ ಗೋವಿಂದಗೌಡ, ದೇವರಾಜ್, ಹಾಗೂ ಮುರಳಿ, ಕೋಲಾರ ತಾಲ್ಲೂಕು ಪಂಚಾಯತಿ ನಿರ್ವಹಣಾಧಿಕಾರಿ ಎನ್.ವಿ ಬಾಬು, ಸೀತಿ ಭೈರವೇಶ್ವರ ಟ್ರಸ್ಟ್ ನ ಅದ್ಯಕ್ಷರಾದ ತಮ್ಮಯ್ಯ, ಸಿಂಡಿಕೇಟ್ ಸದಸ್ಯರಾದ ಎಮ್. ವಿ ರಂಗಪ್ಪ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.