ದೊಡ್ಡಬಳ್ಳಾಪುರ: ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಕಾರ್ಯಕ್ರಮವನ್ನು ಅನುಷ್ಠಾಗೊಳಿಸಲಾಗುತ್ತಿದ್ದು, ವೈಯಕ್ತಿಕ/ಸಮುದಾಯ ನೀರು ಸಂಗ್ರಹಣಾ ಘಟಕಗಳನ್ನು ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಸಹಾಯಧನ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಬರಗಾಲದ ಸಮಯದಲ್ಲಿ ಹಾಗೂ ಬೇಸಿಗೆಯಲ್ಲಿ, ಆಧಾರಿತ ನೀರಾವರಿ ಅಗತ್ಯತೆಯನ್ನು ಒದಗಿಸುವುದು ಹಾಗೂ ತೋಟಗಾರಿಕೆ ಬೆಳೆಗಳು ಒಣಗುವ ಸಮಯದಲ್ಲಿ ನಿರ್ಣಾಯಕ ಹಂತದ ನೀರುಣಿಸುವಿಕೆಯಿಂದ ಬೆಳೆಯನ್ನು ರಕ್ಷಿಸುವ ಅವಶ್ಯಕತೆ ಇರುವುದರಿಂದ, ನೀರು ಸಂಗ್ರಹಣಾ ಘಟಕಗಳನ್ನು ರಚಿಸಿಕೊಂಡು, ಮಳೆಗಾಲದಲ್ಲಿ ಮಳೆನೀರು, ನಾಲೆ ನೀರು, ಹರಿಯುವ ಇತ್ಯಾದಿ ಮೂಲಗಳಿಂದ ಹರಿಯುವ ನೀರನ್ನು ಸದುಪಯೋಗ ಪಡಿಸಿಕೊಂಡು ಸಂಗ್ರಹಿಸುವುದು ಅತ್ಯವಶ್ಯಕವಾಗಿರುವುದರಿಂದ ನೆಲಮಟ್ಟಕ್ಕಿಂತ ಕೆಳಗೆ ರಚಿಸುವ ನೀರು ಸಂಗ್ರಹಣಾ ಘಟಕಗಳ ಮತ್ತು ನೆಲಮಟ್ಟಕ್ಕಿಂತ ಮೇಲೆ ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗನುಗುಣವಾಗಿ ಸಹಾಯಧನ ನೀಡಲಾಗುವುದು.
ನೆಲಮಟ್ಟಕ್ಕಿಂತ ಕೆಳಗಿನ ಘಟಕದಲ್ಲಿ 4000 ಕ್ಯುಬಿಕ್ ಮೀಟರ್ (ಉದಾ: ಅಳತೆ:37ಮೀ X 37ಮೀ X 3ಮೀ) ಗಾತ್ರದ ಘಟಕಕ್ಕೆ 06 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 03 ಲಕ್ಷ ಸಹಾಯಧನ, 6000 ಕ್ಯುಬಿಕ್ ಮೀಟರ್ (ಉದಾ: ಅಳತೆ:45ಮೀ X 45ಮೀ X 3ಮೀ) ಗಾತ್ರದ ಘಟಕಕ್ಕೆ 08 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 04 ಲಕ್ಷ ಸಹಾಯಧನ, 8000 ಕ್ಯುಬಿಕ್ ಮೀಟರ್ (ಉದಾ: ಅಳತೆ:52ಮೀ X 52ಮೀ X 3ಮೀ) ಗಾತ್ರದ ಘಟಕಕ್ಕೆ 10 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 05 ಲಕ್ಷ ಸಹಾಯಧನ, ನೆಲಮಟ್ಟಕ್ಕಿಂತ ಮೇಲಿನ ಘಟಕದಲ್ಲಿ (Modular Steel Tank) 100000 ಲೀ. ಸಾಮರ್ಥ್ಯ (6.4 ಮೀ Diameter X 3.05 ಮೀ) ಗಾತ್ರದ ಘಟಕಕ್ಕೆ 6.50 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 3.25 ಲಕ್ಷ ಸಹಾಯಧನ, 200000 ಲೀ.ಸಾಮರ್ಥ್ಯ (9.0 ಮೀ Diameter X 3.05 ಮೀ) ಗಾತ್ರದ ಘಟಕಕ್ಕೆ 10 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 05 ಲಕ್ಷ ಸಹಾಯಧನ, 500000 ಲೀ.ಸಾಮರ್ಥ್ಯ (14.63 ಮೀ Diameter X 3.05 ಮೀ) ಗಾತ್ರದ ಘಟಕಕ್ಕೆ 15 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 7.50 ಲಕ್ಷ ಸಹಾಯಧನವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ, ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಗಂಗಪ್ಪ.ಎಸ್.ಹೊಂಬಾಳ ಮೊ.ಸಂ.: 9845643312, ತಾಂತ್ರಿಕ ಸಹಾಯಕ ಆದರ್ಶ.ಆರ್.ಕೆ ಮೊ.ಸಂ.: 8892367827, ಕಚೇರಿ ದೂ.ಸಂ.: 080-27681204, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಶ್ರೀನಿವಾಸ್ ಮೊ.ಸಂ.: 9632410677, ತಾಂತ್ರಿಕ ಸಹಾಯಕ ಮಾರುತಿ ಮೊ.ಸಂ.: 9741895988, ಕಚೇರಿ ದೂ.ಸಂ.: 080-27623770, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ಪ್ರಶಾಂತ್ ಮೊ.ಸಂ.: 9538953949, ತಾಂತ್ರಿಕ ಸಹಾಯಕ ಸೋಮಶೇಖರ್ ಮೊ.ಸಂ.: 8453966868, ಕಚೇರಿ ದೂ.ಸಂ.: 080-29716626, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಸುಬ್ರಮಣ್ಯ.ಜೆ.ವಿ. ಮೊ.ಸಂ.: 9901754339, ತಾಂತ್ರಿಕ ಸಹಾಯಕ ವಿಜಯಕುಮಾರ್ ಮೊ.ಸಂ.: 9902581832 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ) ಮಾಹಾಂತೇಶ ಮುರಗೋಡ(ಮೊ.ಸಂ.: 9448999214) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.