ದೊಡ್ಡಬಳ್ಳಾಪುರ: ತಾಲೂಕಿನ ಚನ್ನವೀರನಹಳ್ಳಿ ಯುವಕರು ಸ್ವಂತ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಕಟ್ಟಡದಲ್ಲಿ ಅಳವಡಿಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಸಾಸಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿರುಪತಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಕಟ್ಟಡ ನಿರ್ಮಿಸಿಕೊಟ್ಟಿರುವ ಯುವಕರ ಪಾತ್ರ ಶ್ಲಾಘನೀಯವಾಗಿದ್ದು, ಸಾರ್ವಜನಿಕರು ಉತ್ತಮ ಆರೋಗ್ಯಕ್ಕಾಗಿ ಶುದ್ದಕುಡಿಯುವ ನೀರಿನ ಘಟಕದ ನೀರನ್ನು ಬಳಸುವಂತೆ ಸಲಹೆ ನೀಡಿದರು.
ಮುಖಂಡರಾದ ಸಿ.ನರಸಿಂಹಮೂರ್ತಿ ಮಾತನಾಡಿ, ಫ್ಲೋರೈಡ್ ನಿಂದ ಮುಕ್ತರಾಗಲು ಶುದ್ದಕುಡಿಯುವ ನೀರಿನ ಘಟಕ ಸಹಾಕರಿಯಾಗಿದೆ.ಗ್ರಾಮದ ಯುವಕರ ಸ್ವಂತ ವೆಚ್ಚದಲ್ಲಿ ಸುಸಜ್ಜಿತ ಕಡ್ಡದಲ್ಲಿ ನೀರಿನ ಘಟಕ ಮರು ಚಾಲನೆಯಾಗಿದ್ದು,ಘಟಕದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರಾದ ಗುರುರಾಜು,ನಾಗೇಶ್, ಮುತ್ತುರಾಜ್,ವೆಂಕಟೇಶ್,ಗೋಪಾಲಕೃಷ್ಣ, ಸತೀಶ್,ಲೋಕೇಶ್,ಲಕ್ಷ್ಮೀಪತಿ ,ಸಿ.ಎಂ.ಲಕ್ಷ್ಮೀಪತಿ ಅನಂತ್ ಮೂರ್ತಿ,ನಾಗರಾಜ್,ರಂಗಸ್ವಾಮಯ್ಯ. ವೀರಭದ್ರಪ್ಪ,ದೇವರಾಜು,ಹೇಮಂತರಾಜು,ಡಾ.ನರೇಂದ್ರಬಾಬು,ಹನುಮಂತರಾಜು,ಸಿ.ಎಂ.ರಮೇಶ್,ಸಿ.ಎಂ.ಮುತ್ತರಾಜು,ಮುತ್ತರಾಜು, ಉಮಾಶಂಕರ್,ಕುಮಾರ್,ಮಹೇಶ್ ಮತ್ತಿತರಿದ್ದರು.