ದೊಡ್ಡಬಳ್ಳಾಪುರ: ತಾಲೂಕಿನ ತಾಲೂಕು ಇಸ್ತೂರು ಡಾ.ಅಂಬೇಡ್ಕರ್ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ಗೆ ರೋಟರಿ ದಿಶಾ(ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3190) ಕ್ಲಬ್ ನಿಂದ ನಾಲ್ಕು ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಲಾಯಿತು.
ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ ವಿಶ್ವವ್ಯಾಪಿ ಕಾಡುತ್ತಿರುವ ಕರೊನಾ ಮಹಾಮಾರಿಯ ತಡೆಗಟ್ಟಲು ಸಂಘ ಸಂಸ್ಥೆಗಳು ಸಹಕಾರ ಅಗತ್ಯವಿದೆ. ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಯಾವುದೇ ವೈದ್ಯಕೀಯ ಕಾಲೇಜು ಇಲ್ಲವಾದರೂ, ವಸತಿ ಶಾಲೆಗಳನ್ನೇ ಕೋವಿಡ್ ಕೇರ್ ಸೆಂಟರ್ ಗಳಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಘ ಸಂಸ್ಥೆಗಳು ಈ ಕೋವಿಡ್ ಸೆಂಟರ್ ಗಳಿಗೆ ಅಗತ್ಯವಿರುವ ವಸ್ತುಗಳ ನೆರವನ್ನು ನೀಡುವ ಮೂಲಕ ಸೋಂಕಿತರ ಗುಣಮುಖರನ್ನಾಗಿಸಲು ಕೈ ಜೋಡಿಸಬೇಕಿದೆ.
ಸುಚೇತನ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್(ರಿ) ನ ಮಂಜುನಾಥ್ ನಾಗ್ ಹಾಗೂ ತಾಲೂಕು ಇಸ್ತೂರು ಕೋವಿಡ್ ಕೇರ್ ಸೆಂಟರ್ ನ ನೋಡಲ್ ಆಫೀಸರ್ ಡಾ.ಸಿದ್ದೇಶ್ ಅವರ ಮನವಿಗೆ ಸ್ಪಂದಿಸಿ ರೋಟರಿ ದಿಶಾ(ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3190) ಅವರಿಂದ ನಾಲ್ಕು ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಇಸ್ತೂರು ಕೋವಿಡ್ ಕೇರ್ ಸೆಂಟರಿಗೆ ನೀಡುತ್ತಿರುವುದು ಪ್ರಶಂಸನೀಯ ವಿಷಯವಾಗಿದೆ ಎಂದು ವೆಂಕಟರಮಣಯ್ಯ ಹೇಳಿದರು.
ಈ ವೇಳೆ ಇಸ್ತೂರು ಕೋವಿಡ್ ಕೇರ್ ಸೆಂಟರ್ ನ ನೋಡಲ್ ಆಫೀಸರ್ ಡಾ.ಸಿದ್ದೇಶ್, ರೋಟರಿ ದಿಶಾ ಅಧ್ಯಕ್ಷ ರೋನರೇಶ್ ಭಂಡಿಯ, ಕಾರ್ಯದರ್ಶಿ ರೋ.ಮೋಹಿತ್ ಅಗರ್ವಾಲ್, ಕಾರ್ಯನಿರ್ವಾಹಕ ಕಾರ್ಯದರ್ಶಿ ರೋ. ಚಿರಾಗ್ ಘಂಡಿ, ಸಮುದಾಯ ಸೇವೆ ನಿರ್ದೇಶಕ ರೋ.ಮಧುಸೂದನ್, ರೋಟರಾಕ್ಟ್ ಇಂದಿರನಗರ ಅಧ್ಯಕ್ಷ ರೋ.ಅಕ್ಷಯ್, ಪದಾಧಿಕಾರಿ ರೋ.ಸುಹಾಸ್, ಸುಚೇತನ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ರೋ.ಮಂಜುನಾಥ್ ನಾಗ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…