ತಿರುವನಂತಪುರಂ: ಸುಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವನ್ನು ಜುಲೈ 17 ರಿಂದ 21ರ ವರೆಗೆ ತೆರೆಯಲಾಗುತ್ತಿದ್ದು, ಭಕ್ತರು ಅಯ್ಯಪ್ಪನ ದರ್ಶನ ಪಡೆಯಬಹುದಾಗಿದೆ.
ಕರೊನಾ 2ನೇ ಅಲೆ ಮಧ್ಯೆ ತಿಂಗಳ ಪೂಜೆಯನ್ನು ನೆರವೇರಿಸಲು ಜುಲೈ 17 ರಿಂದ 21ರ ವರೆಗೆ ಈ ಐದು ದಿನಗಳ ಸಮಯದಲ್ಲಿ ಕೆಲವು ನಿಬಂಧನೆಗಳೊಂದಿಗೆ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಶನಿವಾರ ತಿರುವಾಂಕುರ್ ದೇವಸ್ವಂ ಮಂಡಳಿ ತಿಳಿಸಿದೆ.
ಕರೊನಾ ಹೊಸ ಮಾರ್ಗಸೂಚಿಗಳ ಪ್ರಕಾರ ಲಸಿಕೆ ಪಡೆದ ಸರ್ಟಿಫಿಕೇಟ್ ಅಥವಾ 48 ಗಂಟೆಗಳೊಳಗೆ ಟೆಸ್ಟ್ ಮಾಡಿಸಿದ ಕೋವಿಡ್-19 ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಅಲ್ಲದೆ ಆನ್‍ಲೈನ್ ಮೂಲಕ ಬುಕಿಂಗ್ ಮಾಡಿಕೊಂಡ ಗರಿಷ್ಠ 5 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಕೇರಳ ಪೊಲೀಸರು ಹಾಗೂ ದೇವಸ್ವಂ ಮಂಡಳಿ ಕಳೆದ ವರ್ಷ ಹೊಸ ಆನ್‍ಲೈನ್ ಪೋರ್ಟಲ್ ಲಾಂಚ್ ಮಾಡಿದ್ದು, ಇದರ ಮೂಲಕವೇ ವಚ್ರ್ಯೂಲ್ ಕ್ಯೂ, ಪ್ರಸಾದ, ಪೂಜೆ, ವಾಸ್ತವ್ಯ, ಕಾಣಿಕೆ ಬುಕ್ ಮಾಡಬೇಕು. ಈ ಮೂಲಕ ಗಲಾಟೆ ಮುಕ್ತ ದರ್ಶನಕ್ಕೆ ದೇವಸ್ಥಾನ ಮಂಡಳಿ ವ್ಯವಸ್ಥೆ ಕಲ್ಪಿಸಿದೆ. ರಿಜಿಸ್ಟ್ರೇಶನ್ ಮಾಡಲು ಮೊಬೈಲ್ ನಂಬರ್, ಇ-ಮೇಲ್ ಐಡಿ ಕಡ್ಡಾಯವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..