ಮೈಸೂರು ಅರಸರ ಕುಟುಂಬದವನೆಂದು ನಂಬಿಸಿ ಯುವತಿಯರಿಂದ ಹಣ ಪೀಕುತ್ತಿದ್ದ ಕದೀಮನ ಬಂಧನ

ಬೆಂಗಳೂರು: ಆನ್‍ಲೈನ್ ಮೂಲಕ  ಯುವತಿಯರಿಗೆ ತಾನು ಮೈಸೂರು ಅರಸರ ಕುಟುಂಬದ ಸಂಬಂಧಿ ಎಂದು ಪರಿಚಯಮಾಡಿಕೊಂಡು ಮದುವೆಯಾಗುತ್ತೇನೆಂದು ನಂಬಿಸಿ ಯುವತಿಯರಿಂದ ಹಣ ಪಡೆದು ಮೋಸ ಮಾಡಿ, ವಂಚಿಸಿರುವ ಆರೋಪಿಯನ್ನು ವೈಟ್ ಫೀಲ್ಡ್‌ ಸಿ.ಇ.ಎನ್ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.

ಆರೋಪಿಯಾದ ಸಿದ್ಧಾರ್ಥ್.ಕೆ ಎಂಬ ವ್ಯಕ್ತಿಯು ಆನ್‍ಲೈನ್‍ನಲ್ಲಿ “Sangam Matrimony” & “Kannada Matrimony” ಎಂಬ ವೆಬ್‍ಸೈಟ್‍ಗಳನ್ನು ಉಪಯೋಗಿಸಿಕೊಂಡು ಸದರಿ‌ ವೈಬ್‍ಸೈಟ್‍ಗಳಲ್ಲಿ ವಿವಾಹವಾಗಲು ಆಸಕ್ತಿ ತೋರುವ ಯುವತಿಯರನ್ನು ಪರಿಚಯಮಾಡಿಕೊಂಡು ತಾನು ಯು.ಎಸ್.ಎ (ಅಮೇರಿಕಾ) ದಲ್ಲಿ ಮೈಕ್ರೋಸಾಪ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಒಂದು ಫ್ರೋಫೈಲ್ ಅನ್ನು ಸೃಷ್ಟಿಸಿ, ಹಾಗೂ ತಾನು ಮೈಸೂರು ಸಂಸ್ಥಾನದ ರಾಜವಂಶಸ್ಥರ ಸಂಬಂಧಿ ಅರಸು ಕುಟುಂಬದವನು ಎಂದು ಸುಳ್ಳು ಹೇಳಿ “Siddarth Urs” ಎಂಬ ಹೆಸರಿನಿಂದ ಮ್ಯಾಟ್ರೊಮೋನಿ ವೆಬ್‍ಸೈಟ್‍ನಲ್ಲಿ ಯುವತಿಯವರೊಂದಿಗೆ ಪರಿಚಯ ಮಾಡಿಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ.

ಮೈಸೂರು ರಾಜ ವಂಶಸ್ಥರ ಕುಟುಂಬದವರ ಜೊತೆ ಬಾಲ್ಯವನ್ನು ಕಳೆದಿರುವ ಹಾಗೆ ಚಿಕ್ಕ ವಯಸ್ಸಿನ ಹುಡುಗನ ಭಾವಚಿತ್ರವನ್ನು ಯುವತಿಯರಿಗೆ ಕಳುಹಿಸಿ ಅವರೊಂದಿಗೆ Spanish ಮತ್ತು U.S. English ಭಾಷೆಯಲ್ಲಿ ಮಾತನಾಡಿ ನಂಬಿಸಿದ್ದಲ್ಲದೆ ವೈದ್ಯಕೀಯ ಕಾರಣ & ಇತರೆ ವೈಯಕ್ತಿಕ ಕಾರಣವನ್ನು ನೀಡಿ ಹಲವಾರು ಯುವತಿಯರಿಂದ ಹಂತ ಹಂತವಾಗಿ ಆನ್‍ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿ ಮೋಸ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.

ವೈಟ್‍ಫೀಲ್ಡ್ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುಪ್ರಸಾದ್ ಜಿ. ನೇತೃತ್ವದಲ್ಲಿ ಹಾಗೂ  ನವೀನ್‍ಕುಮಾರ್, ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ರವರು ಮತ್ತು ಸಿ.ಇ.ಎನ್ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಮೈಸೂರು ಜಿಲ್ಲೆಯ ಬೈಲುಕುಪ್ಪೆ ಪಟ್ಟಣದಿಂದ ಆರೋಪಿಯನ್ನು ವಶಕ್ಕೆ ಪಡೆದು ಈತನನ್ನು ವಿಚಾರಣೆಗಾಗಿ ವೈಟ್‍ಫೀಲ್ಡ್ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಆರೋಪಿಯಿಂದ ಎರಡು ಆಪಲ್ ಐಫೋನ್, ಒಂದು ಸ್ಯಾಮ್‌ಸಂಗ್‌ ಮೋಬೈಲ್ ಪೋನ್, 6  ಡೆಬಿಟ್ ಕಾರ್ಡ್, ವಶ ಪಡಿಸಿಕೊಳ್ಳಲಾಗಿದೆ.

ಈ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನ ಬೇರೆ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು  ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಸಿಎಂ ಕುರ್ಚಿ ಬದಲಾವಣೆ ಖಚಿತವಾಗಿದೆ: ಮತ್ತೆ ಭವಿಷ್ಯ ನುಡಿದ ಆರ್‌.ಅಶೋಕ

ಸಿಎಂ ಕುರ್ಚಿ ಬದಲಾವಣೆ ಖಚಿತವಾಗಿದೆ: ಮತ್ತೆ ಭವಿಷ್ಯ ನುಡಿದ ಆರ್‌.ಅಶೋಕ

ಸಿಎಂ ಕುರ್ಚಿ ಬದಲಾವಣೆ ಖಚಿತವಾಗಿದೆ. ಕಾಂಗ್ರೆಸ್‌ ಶಾಸಕರು ಕೂಡ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿಯುತ್ತಿದ್ದಾರೆ. D.K.Shivakumar

[ccc_my_favorite_select_button post_id="110593"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಗೋಣಿ ಚೀಲದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣ.. ಗುರುತು ಪತ್ತೆಗೆ ಪೊಲೀಸರ ಮನವಿ

ದೊಡ್ಡಬಳ್ಳಾಪುರ: ಗೋಣಿ ಚೀಲದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣ.. ಗುರುತು ಪತ್ತೆಗೆ ಪೊಲೀಸರ

ಬಾಶೆಟ್ಟಿಹಳ್ಳಿ ಬಳಿ ಸುಮಾರು 35-40 ವರ್ಷ ವಯಸ್ಸಿನ ಗಂಡಸಿನ ಅಪರಿಚಿತ ಮೃತ ದೇಹ (Unknown body) ಪತ್ತೆ ಪ್ರಕರಣದ ಕುರಿತಂತೆ, ಮೃತನ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.

[ccc_my_favorite_select_button post_id="110603"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!