ಚಿಕ್ಕಬಳ್ಳಾಪುರ: ವಾರಾಂತ್ಯದ ನಿಷೇಧ ವಿದ್ದರೂ ನಂದಿ ಬೆಟ್ಟಕ್ಕೆ ಬೆಳಂಬೆಳಿಗ್ಗೆ ಆಗಮಿಸಿದ ಪ್ರವಾಸಿಗರು ನಂದಿಗಿರಿಧಾಮದ ತಳದಲ್ಲಿ ಪರದಾಡಿದ ಘಟನೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.
ಕರೊನಾ ಸೋಂಕಿನ ಮೂರನೆ ಅಲೆಯ ಭೀತಿ ಹಿನ್ನೆಲೆ ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರರವರಗೆ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಆದರೂ ಸಹಾ ನಂದಿಗಿರಿಧಾಮ ನೋಡಲು ಶುಕ್ರವಾರ ಸಂಜೆ ಬಂದ ಪ್ರವಾಸಿಗರು ರಾತ್ರಿಯಿಡೀ ಕಾಯುತ್ತಿದ್ದರು.
ನೂರಾರು ಕಾರು, ಸಾವಿರಾರು ಬೈಕ್ ಗಳಲ್ಲಿ ಆಗಮಿಸಿರುವ ಪ್ರವಾಸಿಗರು ನಂದಿ ಬೆಟ್ಟಕ್ಕೆ ಪ್ರವೇಶ ಸಿಗಬಹುದೆಂಬ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ನಂದಿಗಿರಿಧಾಮದ ತಟದಲ್ಲಿ ಪೋಲಿಸರು ನಿರ್ಮಿಸಿರುವ ಚೆಕ್ ಪೋಸ್ಟ್ ಬಳಿ ಬಿಡುಬಿಟ್ಟಿರುವ ಪ್ರವಾಸಿಗರಿಗೆ ಪೋಲಿಸರು ಪ್ರತಿ ಶನಿವಾರ, ಭಾನುವಾರ ಬಂದ್ ಆದೇಶವಿದೆ ಎಂದು ತಿಳಿಸಿದರು ಸಹಾ ಬೆಟ್ಟದ ಮೇಲೆ ಪ್ರವೇಶ ಸಿಗಬಹುದೆಂಬ ಆಸೆಯಲ್ಲಿ ಜಾತಕ ಪಕ್ಷಿಗಳಂತೆ ಕೆಲ ಪ್ರವಾಸಿಗರು ಕಾಯುತ್ತಿದ್ದರೆ, ಮತ್ತೆ ಕೆಲ ಪ್ರಯಾಣಿಕರು ಬಂದ ದಾರಿಗೆ ಸುಂಕ ವಿಲ್ಲವೆಂದು ಅಧಿಕಾರಿಗಳ ಶಪಿಸುತ್ತಾ ಹಿಂತಿರುಗಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..