ಬೆಂ.ಗ್ರಾ.ಜಿಲ್ಲೆ: ತೋಟಗಾರಿಕೆ ಇಲಾಖೆ ವತಿಯಿಂದ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಕಾರ್ಯಕ್ರಮವನ್ನು ಅನುಷ್ಠಾಗೊಳಿಸಲಾಗುತ್ತಿದ್ದು, ವೈಯಕ್ತಿಕ/ಸಮುದಾಯ ನೀರು ಸಂಗ್ರಹಣಾ ಘಟಕಗಳನ್ನು ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಸಹಾಯಧನ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಬರಗಾಲದ ಸಮಯದಲ್ಲಿ ಹಾಗೂ ಬೇಸಿಗೆಯಲ್ಲಿ, ಆಧಾರಿತ ನೀರಾವರಿ ಅಗತ್ಯತೆಯನ್ನು ಒದಗಿಸುವುದು ಹಾಗೂ ತೋಟಗಾರಿಕೆ ಬೆಳೆಗಳು ಒಣಗುವ ಸಮಯದಲ್ಲಿ ನಿರ್ಣಾಯಕ ಹಂತದ ನೀರುಣಿಸುವಿಕೆಯಿಂದ ಬೆಳೆಯನ್ನು ರಕ್ಷಿಸುವ ಅವಶ್ಯಕತೆ ಇರುವುದರಿಂದ, ನೀರು ಸಂಗ್ರಹಣಾ ಘಟಕಗಳನ್ನು ರಚಿಸಿಕೊಂಡು, ಮಳೆಗಾಲದಲ್ಲಿ ಮಳೆನೀರು, ನಾಲೆ ನೀರು, ಹರಿಯುವ ಇತ್ಯಾದಿ ಮೂಲಗಳಿಂದ ಹರಿಯುವ ನೀರನ್ನು ಸದುಪಯೋಗ ಪಡಿಸಿಕೊಂಡು ಸಂಗ್ರಹಿಸುವುದು ಅತ್ಯವಶ್ಯಕವಾಗಿರುವುದರಿಂದ ನೆಲಮಟ್ಟಕ್ಕಿಂತ ಕೆಳಗೆ ರಚಿಸುವ ನೀರು ಸಂಗ್ರಹಣಾ ಘಟಕಗಳ ಮತ್ತು ನೆಲಮಟ್ಟಕ್ಕಿಂತ ಮೇಲೆ ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗನುಗುಣವಾಗಿ ಸಹಾಯಧನ ನೀಡಲಾಗುವುದು.
ನೆಲಮಟ್ಟಕ್ಕಿಂತ ಕೆಳಗಿನ ಘಟಕದಲ್ಲಿ 4500 ಕ್ಯುಬಿಕ್ ಮೀಟರ್ (ಉದಾ: ಅಳತೆ: 39ಮೀ X 39ಮೀ X 3ಮೀ) ಗಾತ್ರದ ಘಟಕಕ್ಕೆ 06 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 03 ಲಕ್ಷ ಸಹಾಯಧನ, 6500 ಕ್ಯುಬಿಕ್ ಮೀಟರ್ (ಉದಾ: ಅಳತೆ: 47ಮೀ X 47ಮೀ X 3ಮೀ) ಗಾತ್ರದ ಘಟಕಕ್ಕೆ 08 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 04 ಲಕ್ಷ ಸಹಾಯಧನ, ನೆಲಮಟ್ಟಕ್ಕಿಂತ ಮೇಲಿನ ಘಟಕದಲ್ಲಿ (Modular Steel Tank) 100000 ಲೀ. ಸಾಮರ್ಥ್ಯ (6.4 ಮೀ Diameter X 3.05 ಮೀ) ಗಾತ್ರದ ಘಟಕಕ್ಕೆ 6.50 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 3.25 ಲಕ್ಷ ಸಹಾಯಧನ, 200000 ಲೀ.ಸಾಮರ್ಥ್ಯ (9.0 ಮೀ Diameter X 3.05 ಮೀ) ಗಾತ್ರದ ಘಟಕಕ್ಕೆ 10 ಲಕ್ಷ ಘಟಕ ನಿರ್ಮಾಣ ವೆಚ್ಚಕ್ಕೆ 05 ಲಕ್ಷ ಸಹಾಯಧನವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ(ಜಿಪಂ) ಪಿ.ಮಂಜುಳಾ(ಮೊ.ಸಂ.:9448825101), ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಶ್ರೀನಿವಾಸ್.ಎಂ.(ಮೊ.ಸಂ.:9632410677), ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಪ್ರಶಾಂತ್ ಆರ್(ಮೊ.ಸಂ.:9538953949), ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಸುಬ್ರಮಣ್ಯ.ಜೆ.ವಿ.(ಮೊ.ಸಂ.: 9901754339) ಇವರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕ ಮಾಹಾಂತೇಶ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..