ದೇವನಹಳ್ಳಿ: ವಿಮಾನ ನಿಲ್ದಾಣ ಟೋಲ್ ನಲ್ಲಿ ಯಮವೇಗದಲ್ಲಿ ಬಂದ ಟ್ರಕ್ ನಿಂದ ಟೋಲ್ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೇವನಹಳ್ಳಿಯ ಸಾದಹಳ್ಳಿ ಟೋಲ್ ಬಳಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಾಲಕನೊಬ್ಬ ಬೃಹತ್ ಟ್ರಕ್ ನನ್ನ ಚಾಲನೆ ಮಾಡಿಕೊಂಡು ಬಂದಿದ್ದಾನೆ, ಟೋಲ್ ನಲ್ಲಿ ಅತಿ ವೇಗವಾಗಿ ಟ್ರಕ್ ಚಲಿಸುತ್ತಿದ್ದು, ಟ್ರಕ್ ನಿಲ್ಲಿಸುವಂತೆ ಟೋಲ್ ಸಿಬ್ಬಂದಿ ಸೂಚನೆ ನೀಡುತ್ತಿದ್ದರೂ ಟ್ರಕ್ ಚಾಲಕ ಯಾವುದಕ್ಕೂ ಕೇರ್ ಮಾಡದೆ ನುಗ್ಗಿದ್ದಾನೆ. ಟೋಲ್ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಟ್ರಕ್ ಕೆಳಗೆ ಸಿಲುಕದೆ ಪ್ರಾಣಾಪಯದಿಂದ ಪಾರಾಗಿದ್ದು, ಟ್ರಕ್ ಚಾಲಕನ ಪತ್ತೆ ಕಾರ್ಯ ನಡೆಯುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……