ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಚ್ಚಾರಲಹಳ್ಳಿ ಗ್ರಾಮದ ಸಮೀಪದ ತೋಟದ ಮನೆಯ ಬಳಿ ಕಟ್ಟಲಾಗಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದುಹಾಕಿದೆ.
ಪಚ್ಚಾರಲಹಳ್ಳಿ ಗ್ರಾಮದ ಚಿನ್ನಪ್ಪಣ್ಣ ಎಂಬ ರೈತನ ಸುಮಾರು 12ಸಾವಿರಕ್ಕು ಹೆಚ್ಚು ಮೌಲ್ಯದ ಸೀಮೆ ಕರು ಚಿರತೆ ದಾಳಿಗೆ ಒಳಗಾಗಿ ಸಾವನಪ್ಪಿದ್ದು, ಭಾನುವಾರ ರಾತ್ರಿ ಘಟನೆ ಸಂಭವಿಸಿದೆ.
ಸುಮಾರು ಅರ್ದ ಕಿಮೀ ಎಳೆದೊಯ್ದು ಕರುವನ್ನು ಚಿರತೆ ಕೊಂದು ಹಾಕಿದ್ದು, ಈ ಹಿಂದೆ ಸಹ ಇದೇ ರೀತಿ ದಾಳಿ ಮಾಡಿ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿತ್ತು.
ಘಟನೆ ಕುರಿತು ಸ್ಥಳಕ್ಕೆ ಅರಣ್ಯಾ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಹಾರಕ್ಕೆ ಮನವಿ: ಪದೇ ಪದೇ ಚಿರತೆ ದಾಳಿಯಿಂದ ರೈತರು ನಷ್ಟಕ್ಕೆ ಒಳಾಗುತ್ತಿದ್ದು, ಪರಿಹಾರ ದೊರಕದೆ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗಳಿಗೆ ದಾಖಲೆ ನೀಡಿದರು ಪರಿಹಾರ ಮಾತ್ರ ದೊರಕುತ್ತಿಲ್ಲ ಎಂದು ಬೇಸರ ವ್ಯಾಕ್ತಪಡಿಸಿರುವ ಗ್ರಾಮಪಂಚಾಯಿತಿ ಸದಸ್ಯೆ ನಾಗರತ್ನ ರಮೇಶ್, ನಷ್ಟಕ್ಕೆ ಒಳಗಾಗುವ ರೈತರಿಗೆ ಯಾವುದೇ ಇಲಾಖೆಗಳು ನೆರವಾಗುತ್ತಿಲ್ಲವಾದ ಕಾರಣ, ಈ ಕುರಿತು ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮಪ್ರಭು ಹಾಗೂ ಪಿಡಿಒ ಸೌಭಾಗ್ಯಮ್ಮ ಅವರಿಗೆ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದೆಂದು ತಿಳಿಸಿದ್ದಾರೆ.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..