ಬೆಂಗಳೂರು: ವಿಧಾನಸೌಧದ ಎರಡನೇ ಮಹಡಿಯ 208ನೇ ಕೊಠಡಿ ಸಮೀಪ ಬಿಯರ್ ಬಾಟಲ್ ಪತ್ತೆಯಾಗಿದ್ದು, ಸದ್ಯ ಬಿಯರ್ ಬಾಟಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಸ್ಥಳದಲ್ಲಿದ್ದ ಬಿಯರ್ ಬಾಟಲ್ಗಳನ್ನು ತೆಗೆಯಲಾಗಿದೆ. ಅಲ್ಲದೆ ಈ ಜಾಗವನ್ನು ಸ್ವಚ್ಛತಾ ಸಿಬ್ಬಂದಿಗಳು ಶುಚಿಗೊಳಿಸಿದ್ದಾರೆ.
ಶಕ್ತಿಸೌಧದಲ್ಲಿ ಮದ್ಯಪಾನ ಮಾಡಿದ್ದು ಯಾರು? ಕುಡಿದ ಬಾಟಲ್ ಬಿಟ್ಟು ಹೋಗಿರುವ ಕುಡುಕರು ಯಾರು ಎಂಬ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸ್ಪೀಕರ್ ಕಚೇರಿಯಿಂದ ತನಿಖೆಗೆ ಸೂಚನೆ ನೀಡುವ ಸಾಧ್ಯತೆ ಇದೆ. ವಿಧಾನಸೌಧ ಪೋಲಿಸರು ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..