ಮೈಸೂರು: ಮೈಸೂರು ಮೃಗಾಲಯವು ವನ್ಯ ಪ್ರಾಣಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 1 ರಿಂದ 7ರವರೆಗೆ ವನ್ಯಪ್ರಾಣಿ ಛಾಯಾಗ್ರಹಣ ಸ್ಪರ್ಧೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ವನ್ಯಜೀವಿ ಪ್ರವರ್ಗ, ಮೃಗಾಲಯ ಪ್ರವರ್ಗದಡಿ ಸ್ಪರ್ಧೆ ನಡೆಯಲಿದ್ದು, ಪ್ರತಿ ಪ್ರವರ್ಗಕ್ಕೆ ಪ್ರವೇಶ ಶುಲ್ಕ 100 ರೂ. ನಿಗದಿಪಡಿಸಲಾಗಿದೆ. ಪ್ರತಿ ಪ್ರವರ್ಗಕ್ಕೆ ಮೌಂಟ್ ಮಾಡದಿರುವ 12×18 ಅಳತೆಯ ತಲಾ 2 ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಅಂಗೀಕರಿಸಲಾಗುವುದು.
ಪ್ರತಿಯೊಂದು ಪ್ರವರ್ಗಕ್ಕೆ 3 ನಗದು ಬಹುಮಾನಗಳು ಮತ್ತು 4 ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಈ ಹಿಂದೆ ಮೈಸೂರು ಮೃಗಾಲಯದಲ್ಲಿ ಪ್ರದರ್ಶಿಸಲಾದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಅಂಗೀಕರಿಸಲಾಗುವುದಿಲ್ಲ. ಸೆಪ್ಟೆಂಬರ್ 22ರವರೆಗೂ ಪ್ರವೇಶಗಳನ್ನು ಸ್ವೀಕರಿಸಲು ಅವಕಾಶವಿದೆ.
ಸೆಪ್ಟೆಂಬರ್ 26 ರಂದು ಬಹುಮಾನಿತರನ್ನು ಆಯ್ಕೆ ಮಾಡಲಿದ್ದು, ಅಕ್ಟೋಬರ್ 1 ರಿಂದ 7ರವರೆಗೆ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ದೂ.ಸಂ: 0821-2440752, 9686668099ಅನ್ನು ಸಂಪರ್ಕಿಸುವಂತೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……