ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ 2021-22ನೇ ಸಾಲಿನ NCC ಆಯ್ಕೆ ಪ್ರಕ್ರಿಯೆ ನಡೆದಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
21-22 ನೇ ಸಾಲಿನ ಅಯ್ಕೆಗೆ 36 ವಿದ್ಯಾರ್ಥಿಗಳ ಅಯ್ಕೆ ಪ್ರಕ್ರಿಯೆ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ 8 ಮತ್ತು 9 ನೇ ತರಗತಿಯ ಒಟ್ಟು ವಿಧ್ಯಾರ್ಥಿ ಗಳು 176 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ .ಹೆಣ್ಣು ಮಕ್ಕಳು 9, ಗಂಡು ಮಕ್ಕಳು 27 ಅಯ್ಕೆಯಾದರು.
ಕರ್ನಾಟಕ ಬಾಟಲಿಯನ್ ಬೆಂಗಳೂರು ಎ ಗ್ರೂಪ್ ಟ್ರೈನಿಂಗ್ ಜೆಸಿಓ ಸುಬೇದರ್ ಶೀತಲ್ ಸಿಂಗ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪಿ.ಐ ಸಿಬ್ಬಂದಿಗಳಾದ ನಾಯಕ್ ಸುಬೇದರ್ ಜಗತೀರ ಸಿಂಗ್, ನಾಯಕ್ ಸುಬೇದರ್ ಗುರುಮುಖ ಸಿಂಗ್, ಹವಳದಾರ್ ಕೆ.ವಿ.ರಾವ್, ಶಾಲೆಯ NCC ಅಧಿಕಾರಿ ಡಾ.ಬಿ.ಕೆ.ಅಶ್ವಿನಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..