ದೊಡ್ಡಬಳ್ಳಾಪುರ: ನಗರದ ಗಾಂಧಿನಗರದ ಟೆಕ್ಸ್‍ಟೈಲ್ ಮ್ಯಾನುಫ್ಯಾಕ್ಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿ.,ನ 58ನೇ ವಾರ್ಷಿಕೋತ್ಸವ ಹಾಗೂ ಬ್ಯಾಂಕ್‍ನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಸಿ.ಪುಟ್ಟಯ್ಯ ಸಭಾ ಭವನ ಹಾಗೂ ಆಡಳಿತ ಮಂಡಲಿ ಕಚೇರಿಯ ಉದ್ಘಾಟನೆ ಶುಕ್ರವಾರ ನಡೆಯಿತು.
ಬ್ಯಾಂಕ್‍ನ ಅಧ್ಯಕ್ಷ ಕೆ.ಪಿ.ವಾಸುದೇವ್ ಮಾತನಾಡಿ, ಬ್ಯಾಂಕ್‍ನ ನಿಧಿಯಿಂದ ಯಾವುದೇ ಹಣ ತೆರೆಯದೇ 12 ವರ್ಷದಿಂದ ಕ್ರೋಢೀಕರಿಸಿದ ಬ್ಯಾಂಕ್ ಕಟ್ಟಡ ನಿಧಿಯಿಂದ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ನೇಕಾರರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭವಾಗಿರುವ ಟಿಎಂಸಿ ಬ್ಯಾಂಕ್ ನೇಕಾರರು, ಸಣ್ಣ ಉದ್ಯಮಿಗಳೂ ಸೇರಿದಂತೆ ವಿವಿಧ ವರ್ಗಗಳ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತಿದೆ. ಟಿಎಂಸಿ ಬ್ಯಾಂಕ್ ಮಾರ್ಚ್ 2020ರ ಅಂತ್ಯಕ್ಕೆ 20.44 ಲಕ್ಷ ರೂಗಳ ನಿವ್ಹಳ ಲಾಭ ಗಳಿಸಿದೆ. ಬ್ಯಾಂಕ್ ಅಭಿವೃದ್ದಿ ಹೊಂದುತ್ತಿದೆ. ಆದರೆ ಮಾರ್ಚ್ 2020ರ ನಂತರ ಕೋವಿಡ್ ಕಾರಣದಿಂದಾಗಿ ಬ್ಯಾಂಕ್‍ನ ವಹಿವಾಟಿನಲ್ಲಿ ಕುಸಿತ ಕಂಡಿದೆ. ಬ್ಯಾಂಕ್‍ನಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ಕೋವಿಡ್ ನಿಂದ ಸ್ಥಗಿತಗೊಂಡಿದೆ. ಸದಸ್ಯರ ಕೋರಿಕೆಯ ಮೇರೆಗೆ ಶೇ.10ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಬ್ಯಾಂಕ್‍ನಲ್ಲಿ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ 207 ನೇಕಾರರ ಸಾಲ ಮನ್ನಾ ಮಾಡಲಾಗಿದೆ. ಆ.1ರಿಂದ ಚೆಕ್ ಕ್ಲಿಯರಿಂಗ್ ಹಾಗೂ ಆರ್‍ಟಿಜಿಎಸ್ ಸೌಲಭ್ಯ ವರ್ಷದ 365 ದಿನಗಳ ಚಾಲ್ತಿಯಲ್ಲಿದೆ. ಸದಸ್ಯರು ಹೆಚ್ಚಿನ ಹಣವನ್ನು ಬ್ಯಾಂಕ್‍ನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ಯಾಂಕ್ ಮತ್ತಷ್ಟು ಏಳಿಗೆಯಾಗುವಂತೆ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಮಂಜುನಾಥ್, ಪ್ರಭಾರಿ ವ್ಯವಸ್ಥಾಪಕರಾದ ಎ.ಎಸ್.ಪುಷ್ಪಲತಾ, ನಿರ್ದೇಶಕರಾದ ಎ.ಆರ್.ಶಿವಕುಮಾರ್, ಪಿ.ಸಿ.ವೆಂಕಟೇಶ್, ಎ.ಎಸ್.ಕೇಶವ, ಕೆ.ಜಿ.ಗೋಪಾಲ್, ಡಿ.ಪ್ರಶಾಂತ್ ಕುಮಾರ್, ನಾರಾಯಣ್.ಎನ್.ನಾಯ್ಡು, ಬಿ.ಆರ್.ಉಮಾಕಾಂತ್, ಎ.ಗಿರಿಜಾ, ಡಾ.ಆರ್.ಇಂದಿರಾ, ವೃತ್ತಿಪರ ನಿರ್ದೇಶಕರಾದ ಕೆ.ಎಂ.ಕೃಷ್ಣಮೂರ್ತಿ, ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……