ಹಾವೇರಿ: ಶಿಳ್ಳೆ,ಚಪ್ಪಾಳೆ ಇದ್ದರೆನೇ ಕಲಾವಿದರ ಜೀವನ.ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ನೋಡುವ ಮೂಲಕ ಚಿತ್ರರಂಗವನ್ನು ಕಲಾವಿದರನ್ನು ಜನರು ಬೆಳೆಸಬೇಕು ಎಂದು ಚಲನಚಿತ್ರ ನಟರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಿರೇಕೆರೂರಿ ತಾಲೂಕಿನಲ್ಲಿ ನಡೆದ ರೈತರೊಂದಿಗೊಂದು ದಿನ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಛಲದೋಳ್ ದುರ್ಯೋಧನ. ನಾನು ಆಧುನಿಕ ಕೌರವನ ಪಾತ್ರ ಮಾಡಿದ್ದೆ.ಪೌರಾಣಿಕ ಕೌರವ ಧುರ್ಯೋಧನನಾಗಿದ್ದು ನಟ ದರ್ಶನ್. ಬಹಳ ವರ್ಷ ನಾನು ಸಿನಿಮ ಮಾಡಿರಲಿಲ್ಲ. ಯಶಸ್ ಸೂರ್ಯ ನಟನನ್ನು ಪರಿಚಯಿಸಿ ಚಿತ್ರರಂಗದಲ್ಲಿ ಬೆಳೆಸುವ ದೃಷ್ಟಿಯಿಂದ ದರ್ಶನ್ ಅವರ ಸ್ಫೂರ್ತಿ ಡಿ ಬಾಸ್ ಶಕ್ತಿಯಿಂದ ಮುಂದಾಗಿದ್ದೇವೆ. ಅದರಂತೆ ಗರಡಿ ಚಿತ್ರ ನಿರ್ಮಾಣವಾಗುತ್ತಿದೆ ಎಂದರು.
ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿ ಹಿರೇಕೆರೂರೊಗೆ ಬಂದಿದ್ದಾರೆ.ಯಾವುದೇ ಗಾಡ್ ಫಾದರ್ ಇಲ್ಲದೇ ಬೆಳೆದವರು ನಟ ದರ್ಶನ್‌ಗೆ ರಾಜ್ಯದ ಜನತೆಯೇ ಅಭಿಮಾನಿಗಳು.ಗಾಡ್ ಫಾದರ್. ದುರ್ಗಾದೇವಿ ಪಾದಾರವಿಂದಗಳಿಗೆ ನಮಸ್ಕರಿಸೋ ಮೂಲಕ ಗರಡಿ ಚಿತ್ರಕ್ಕೆ ಕ್ಲ್ಯಾಪಿಂಗ್ ಮಾಡಿದ್ದೇವೆ. ಡಿ ಬಾಸ್ ಎಂದರೆನೇ ದರ್ಶನ್. ಶಿಳ್ಳೆ ಚಪ್ಪಾಳೆ ಇದ್ದರೆನೇ ಜೀವ. ಜನತೆ ನನ್ನನ್ನು ಶಾಸಕರನ್ನಾಗಿ ಮಾಡಿ ಕೃಷಿಕರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ರಾಜ್ಯದ ರೈತರ ಹಿತ ಕಾಯಲು ಕೃಷಿ ಅಭಿಮಾನಿ ರೈತನೂ ಆಗಿರುವುದರಿಂದ ರೈತರ ಮೇಲಿನ ಅಭಿಮಾನದಿಂದ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ.ಇದೇ ಪ್ರೀತಿಯಿಂದ ಹಿರೇಕೆರೂರಿನಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಿಸಿಪಿ ಹೇಳಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತನಾಡಿ,ಪೊಲೀಸನಾಗಿ, ನಟ,ನಿರ್ಮಾಪಕನಾಗಿ ನಂತರ ಇದೀಗ ಸಚಿವನಾಗುವುದು ಬಹಳ ಸುಲಭದ ಕೆಲಸವಲ್ಲ. ಏನೇ ಕೆಲಸವಾಗಲೀ ಅದನ್ನು ಗುರಿಯಿಟ್ಟು ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಇದಕ್ಕೆ ಬಿ.ಸಿ.ಪಾಟೀಲರೇ ಸಾಕ್ಷಿ. ಬಿ.ಸಿ.ಪಾಟೀಲರನ್ನು ನಾನು ಪ್ರೀತಿಯಿಂದ ಕಾಕವರೇ ಎನ್ನುತ್ತೇನೆ.ರೈತರು ಪ್ರೀತಿಯಿಂದ ಬಹಳ ಕಷ್ಟಪಟ್ಟು ಬೆಳೆ ಬೆಳಯುತ್ತಾರೆ.ರೈತರು ಮತ್ತು ಸೈನಿಕರು ದೇಶದ ಬೆನ್ನೆಲಬು.ಭೂಮಿತಾಯಿಯನ್ನು ನಂಬಿ ಕಷ್ಟಪಟ್ಟು ದುಡಿಯುತ್ತಾನೆ.ರೈತ ತಂತ್ರಜ್ಞಾನ ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಫಸಲು ಬೆಳೆದಲ್ಲಿ ತಮ್ಮ ಆದಾಯ ದ್ವಿಗುಣಗೊಳಿಸಬಹುದು ಎಂದು ಕರೆ ನೀಡಿದರು.
ಕಲಾವಿದರ ದೇಹ ಇರುವುದು ಅಭಿಮಾನಿಗಳಿಂದ.ಕಲಾವಿದರು ಪ್ರೀತಿ ಪ್ರೋತ್ಸಾಹದಿಂದ ಬೆಳೆಯುತ್ತಾರೆ. ನಿರ್ದೇಶಕ ಯೋಗರಾಜ್ ಭಟ್ ಗರಡಿ ಚಿತ್ರ ನಿರ್ದೇಶಿಸುತ್ತಿದ್ದಾರೆ.ಯಶಸ್ ಸೂರ್ಯ ನಮ್ಮ ಹಿರೋ.ಯಶಸ್ ಸೂರ್ಯ ಸೇರಿದಂತೆ ಎಲ್ಲಾ ಕಲಾವಿದರ ಮೇಲೆ ಅಭಿಮಾನ ಪ್ರೀತಿಯಿರಲಿ ಎಂದು ದರ್ಶನ್ ಮನವಿ ಮಾಡಿದರು.
ರೈತಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.ಇತ್ತೀಚೆಗೆ ಅಗಲಿದ ಚಿತ್ರನಟ ದಿ.ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೃಷಿ ಸಚಿವ ಬಿ.ಸಿ.ಪಾಟೀಲ್ ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ರೈತರ ಹೆಸರಿನಲ್ಲಿ ಸಾರ್ವಜನಿಕವಾಗಿ ಆಚರಿಸಿಕೊಂಡರು.
ದರ್ಶನ್ ಅಭಿಮಾನಿಗಳಿಂದ ಬಿ.ಸಿ.ಪಾಟೀಲರು ಹಾಗೂ ದರ್ಶನ್‌ರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ನಿರ್ದೆಶಕ ಯೋಗರಾಜ್ ಭಟ್ ಅವರಿಂದ ವೇದಿಕೆಯಲ್ಲಿ ಸೌಮ್ಯ ಬ್ಯಾನರ್ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗರಡಿ ಚಲನಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ,ಈ ಚಲನಚಿತ್ರದ ಹಿಂದೆ ಆಲದ ಮರದ ತರಹ ನಿಂತವರು ನಟ ದರ್ಶನ್ ನೂತನ ಯಶಸ್ ಸೂರ್ಯರಂತವರನ್ನು ಕೈಹಿಡಿದು ನಡೆಸಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಮಾತನಾಡಿದರು.
ವೇದಿಕೆಯಲ್ಲಿ ನಿರ್ದೇಶಕ ಯೋಗರಾಜ್‌ಭಟ್, ನಟ ಶ್ರೇಯಸ್ ಸೂರ್ಯ, ಬಿಜೆಪಿ ಯುವನಾಯಕಿ ಸೃಷ್ಟಿಪಾಟೀಲ್, ದೊಡ್ಡಗೌಡಪಾಟೀಲ್, ಗುರುಶಾಂತ್ ಯತ್ನಾಳ್, ಸಿದ್ದರಾಜ್ ಕಲ್ಬಡ್ಡಿ ಸೇರಿದಂತೆ ಮತ್ತಿತ್ತರು ಪ್ರಮುಖರು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….