ದೊಡ್ಡಬಳ್ಳಾಪುರ: ಶಾಲೆ-ಕಾಲೇಜು ಸಮಯಕ್ಕೆ ಸನರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಮಾರ್ಗದಲ್ಲಿ ಮುಂಚೆ ತೂಬಗೆರೆ – ದೊಡ್ಡಬಳ್ಳಾಪುರ ಹಾಗೂ ಮುದ್ದೇನಹಳ್ಳಿ – ದೊಡ್ಡಬಳ್ಳಾಪುರಕ್ಕೆ ಸಾರಿಗೆ ಸೌಲಭ್ಯ ಇತ್ತು. ಅದರೆ ಕೋವಿಡ್ ಕಾರಣ ನಿಲ್ಲಿಸಲಾದ ಸಾರಿಗೆ ಮತ್ತೆ ಆರಂಭವಾಗಿದ್ದರು ದೊಡ್ಡಬಳ್ಳಾಪುರ – ತೂಬಗೆರೆ ನಡುವೆ ಸಾರಿಗೆ ಸೇವೆ ಆರಂಭವಾಗದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬುದು ಆರೋಪ.
ಈ ವ್ಯಾಪ್ತಿಯಲ್ಲಿ ಸುಮಾರು 100ಕ್ಕು ವಿದ್ಯಾರ್ಥಿಗಳು ದೊಡ್ಡಬಳ್ಳಾಪುರಕ್ಕೆ ವ್ಯಾಸಂಗಕ್ಕಾಗಿ ಬರುವುದರಿಂದ 8.30 ಬರುವ ಮುದ್ದೇನಹಳ್ಳಿ – ದೊಡ್ಡಬಳ್ಳಾಪುರ ನಡುವೆ ಸಂಚರಿಸುವ ಸರ್ಕಾರಿ ಸಾರಿ ಬಸ್ಸು ಒಂದರಲ್ಲೆ ಪರದಾಡುತ್ತಾ ತೆರಳವಂತಾಗಿದೆ ಎಂಬುದು ವಿದ್ಯಾರ್ಥಿಗಳ ಆಕ್ರೋಶ.
ಈ ಕುರಿತಂತೆ ಇಂದು ತಿರುಮಗೊಂಡನಹಳ್ಳಿ ಬಳಿ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದು, ವಿಷಯ ತಿಳಿದ ಡಿಪೋ ಅಧಿಕಾರಿಗಳು ಹೆಚ್ಚುವರಿ ಬಸ್ ಕಳಿಸಿದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಜಡಿ ಮಳೆಯಲ್ಲಿಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……