ದೊಡ್ಡಬಳ್ಳಾಪುರ: ಕೋವಿಡ್ -19 ಲಸಿಕೆಯ ಮತ್ತೊಂದು ಮಹತ್ತರ ಅಭಿಯಾನಕ್ಕೆ ದೇಶಾದ್ಯಂತ ಇಂದು ಸೋಮವಾರ(ಜ.3)ಚಾಲನೆ ನೀಡಲಾಗುತ್ತಿದೆ. ಅಂತೆಯೆ 15ರಿಂದ 18 ವರ್ಷದ ಮಕ್ಕಳಿಗೆ ಕರೊನಾ ಲಸಿಕೆ ಅಭಿಯಾನಕ್ಕೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು.
ಮಕ್ಕಳು ಆಧಾರ್ ಕಾರ್ಡ್ ಅಥವಾ ಶಾಲೆಯ ಗುರುತು ಪತ್ರ ಪಡೆದು ಲಸಿಕೆ ನೀಡಲಾಗುತ್ತಿದ್ದು, ಮಕ್ಕಳಿಗೆ ಲಸಿಕೆ ನೀಡಿದ ನಂತರ ಅರ್ಧ ಗಂಟೆ ಕಾಲ ಅವರನ್ನು ನಿಗಾವಹಿಸಲು ಇರಿಸಿಕೊಂಡು ನಂತರ ಯಾವುದೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರದಿದ್ದರೆ ಕಳುಹಿಸಲಾಗುತ್ತಿದೆ.
ಈ ವೇಳೆ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಮೋಹನಕುಮಾರಿ, ನಗರಸಭೆ ಅಧ್ಯಕ್ಷೆ ಸುಧಾಲಕ್ಷ್ಮೀನಾರಾಯಣ, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಸೇರಿದಂತೆ ನಗರಸಭೆ ಸದಸ್ಯರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….