ದೊಡ್ಡಬಳ್ಳಾಪುರ: ನಗರದಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಹಾಗೂ ಕನ್ನಡ ಭಾಷೆಯನ್ನು ವೈಭವಿಕರಿಸಬೇಕು ತಪ್ಪಿದಲ್ಲಿ ಅಂತಹ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ (ನೋ ) ವತಿಯಿಂದ ನಗರಸಭೆ ಕಚೇರಿ ವ್ಯವಸ್ಥಾಪಕ ಮಮತಾಬ್ ಪಾಷಾ ಮೂಲಕ ಪೌರಾಯುಕ್ತರು ಮತ್ತು ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಈ ವೇಳೆ ಮಾತನಾಡಿದ ಕನ್ನಡ ಪರ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷ ಎ.ನಂಜಪ್ಪ ಅವರು, ಮನವಿ ಕುರಿತು ನಗರಸಭೆ ತ್ವರಿತವಾಗಿ ಕ್ರಮಕೈಗೊಳ್ಳಬೇಕಿದೆ, ಇಲ್ಲವಾದಲ್ಲಿ ಪ್ರತಿಭಟನೆಯ ಮೂಲಕ ಕನ್ನಡ ಬಳಸದ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತರಿದಾಳ್, ಉಪಾಧ್ಯಕ್ಷ ಅಗ್ನಿ ವೆಂಕಟೇಶ್, ಸಂಚಾಲಕ ನಯಾಜ್ ಖಾನ್, ಮುಖಂಡರಾದ ಶಕೀಲ್, ಆರ್.ಭಾಸ್ಕರ್, ಎಲೆ ಮಂಜುನಾಥ್, ರೋಜಿಪುರ ಮಂಜುನಾಥ್, ಶಿವಣ್ಣ, ಸೋಮು ವಿಶ್ವಕರ್ಮ, ಗಂಗರಾಜಪ್ಪ, ಹಿರಿಯ ಪತ್ರಕರ್ತ ದೇವರಾಜಪ್ಪ, ವೈರ್ ಶಿವಕುಮಾರ್, ಚಾಂದ್, ಅಹಮದ್ ಇನ್ನು ಅನೇಕ ಪದಾಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….