ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜ.27ರ ಬುಲೆಟಿನ್ ಅನ್ವಯ ಇಂದು ಜಿಲ್ಲೆಯಲ್ಲಿ ಹೊಸದಾಗಿ 1091 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ 555 ಜನ ಗುಣಮುಖರಾಗಿದ್ದಾರೆ.
ವರದಿಯನ್ವಯ ಹೊಸಕೋಟೆ ತಾಲೂಕಿನ 147 ಪುರುಷರು, 152 ಮಹಿಳೆಯರು ಸೇರಿ 299.
ದೇವನಹಳ್ಳಿ ತಾಲೂಕಿನ 92 ಪುರುಷರು, 53 ಮಹಿಳೆಯರು ಸೇರಿ 145.
ದೊಡ್ಡಬಳ್ಳಾಪುರ ತಾಲೂಕಿನ 162 ಪುರುಷರು, 111 ಮಹಿಳೆಯರು ಸೇರಿ 273.
ನೆಲಮಂಗಲ ತಾಲೂಕಿನ 224 ಪುರುಷರು, 134 ಮಹಿಳೆಯರು ಸೇರಿ 358 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಉಳಿದಂತೆ ಬೆಂಗಳೂರು ಉತ್ತರ ಹಾಗೂ ಅನ್ಯ ಜಿಲ್ಲೆಯ 12 ಪುರುಷರು, 04 ಮಹಿಳೆಯರು ಸೇರಿ 16 ಮಂದಿಗೆ ಸೋಂಕು ತಗುಲಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7664ಕ್ಕೆ ಏರಿಕೆಯಾಗಿದೆ. ಅಲ್ಲದೆ 32817 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಅನ್ವಯ1791 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
(ಆತಂಕ ಬೇಡಾ, ಮುಂಜಾಗ್ರತೆ ಇರಲಿ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….