ಬೆಂಗಳೂರು, (ಆಗಸ್ಟ್.12); ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಅವರ ಆಸ್ತಿ-ಪಾಸ್ತಿ, ಮಂದಿರಗಳ ಮೇಲಿನ ದಾಳಿ ಕುರಿತು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರಕ್ಷಣೆಗೆ ನಿಲ್ಲದೆ ಸುಮ್ಮನಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಶ್ರೀ ರಾಮ ಸೇನೆವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಿಂದೂಗಳು, ಶ್ರೀ ರಾಮನನ್ನು ನಂಬಿ ಅಧಿಕಾರಕ್ಕೆ ಬಂದ ಪಕ್ಷ, ಆದರೆ ಇದೀಗ ನೆರೆಯ ರಾಷ್ಟ್ರದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೂ ಕೂಡ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಂಗ್ಲಾದಲ್ಲಿ ನಮ್ಮ ಸಮುದಾಯವನ್ನು ನಾಶ ಮಾಡಲು ಹೊರಟಿದ್ದಾರೆ. ಕನಿಷ್ಠ ಎಚ್ಚರಿಕೆ ಕೊಡಲು ಮೋದಿ ಸರ್ಕಾರಕ್ಕೆ ಆಗ್ತಾ ಇಲ್ಲ ಅಂದ್ರೆ ಏನ್ ಅರ್ಥ..? ಇವತ್ ಬಾಂಗ್ಲಾ, ನಾಳೆ ಪಶ್ಚಿಮ ಬಂಗಾಳ, ನಾಡಿದ್ದು ದೆಹಲಿ, ಆಚೆ ನಾಡಿದ್ದು ಕರ್ನಾಟಕ… ಎಷ್ಟಂತ ಸಹಿಸಬೇಕು..? ಹಿಂದೂಗಳ ರಕ್ಷಣೆ ಮಾಡಬೇಕಾದವರು ಯಾರು ಎಂದು ಪ್ರಮೋದ್ ಮುತಾಲಿಕ್ ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಈ ಹಿಂದೆ ಶ್ರೀಮತಿ ಇಂದಿರಾ ಗಾಂಧಿಯವರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇದೇ ರೀತಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದಾಗ, ಪಾಕಿಸ್ತಾನವನ್ನು ತುಂಡರಿಸಿ ಬಾಂಗ್ಲಾದೇವನ್ನು ರಚಿಸಿದರು. ಅಂತೆಯೇ ತ್ವರಿತವಾಗಿ ಕೇಂದ್ರ ಸರ್ಕಾರ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಅಂತ ನಾವು ಬಯಸುತ್ತಿದ್ದೇವೆ.
ಎಷ್ಟಂತ ಸಹಿಸುವುದು, ಓಟಾಕಿದ್ದೀವಿ, ಅಧಿಕಾರಕ್ಕೆ ತಂದಿದ್ದೀವಿ.. ಆದರೂ ನಮ್ಮವರೇ ಸಾಯುತ್ತಿದ್ದಾರೆ.. ಇಡೀ ದೇಶ ಆಕ್ರೋಶದಿಂದ ಕುದಿಯುತ್ತಿದೆ. ಮೋದಿ ಅವರೇ ನಿಮ್ಮ ಕಡೆ ಇಡೀ ದೇಶ ನೋಡ್ತಾ ಇದೆ. ಆ ಹೆಣ್ಣುಮಕ್ಕಳ ಅಳಲು ನಿಮಗೂ ಕೇಳುಸ್ತಾ ಇದೆ. ಹೆಣ್ಣುಮಕ್ಕಳ ರಕ್ತಪಾತ ನಿಮಗೂ ಗೊತ್ತಾಗ್ತಾ ಇದೆ. ಆದರೂ ಕೂಡ ಬಾಯಿ ಬಿಡ್ತಾ ಇಲ್ಲಾ.. ಕನಿಷ್ಠ ಎಚ್ಚರಿಕೆ ಕೋಡ್ತಾಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಕರ್ನಾಟಕ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ಮೂಲಕ ಮೋದಿ ಸರ್ಕಾರಕ್ಕೆ, ಕೇಂದ್ರ ಸರಕಾರಕ್ಕೆ ಒಂದು ಸಂದೇಶ ಕೊಡಲು ಇದು ಆರಂಭ.
ಒಂದು ವೇಳೆ ಕೇಂದ್ರ ಹಿಂದೂಗಳ ರಕ್ಷಣೆಗೆ ಹಿಂದೇಟು ಹಾಕಿದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ಮುತಾಲಿಕ್ ನೀಡಿದರು.
ಈ ವೇಳೆ ಮುಖಂಡರಾದ ಸುಂದರೇಶ್, ಅಮರನಾಥ್, ಗಂಗಾಧರ್, ಕುಲಕರ್ಣಿ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….