ಬೆಂಗಳೂರು: ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳೆಲ್ಲ ಜಲಾವೃತವಾಗಿದೆ, ನಿನ್ನೆ ನಾನೆ ನೋಡಿ, ಅನುಭಾವಸಿ, ತಗ್ಲಾಕ್ಕಂಡಿದ್ದೀನಿ ( ನಾನು ಕೂಡ ನೀರಿನ ಮದ್ಯೆ ಸಿಲುಕಿಕೊಂಡಿದ್ದೆ) ಇವೆಲ್ಲದರ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಶ್ವಾಸನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಅನಾಹುತ ಉಂಟಾಗಿದೆ. ದುಬೈ ದೆಹಲಿಯಲ್ಲಿ ಏನು ಆಗ್ತಾ ಇದೆ ಅದೇ ಇಲ್ಲಿ ಕೂಡ ಅದೇ ಆಗ್ತಾ ಇದೆ. ಪ್ರಕೃತಿಯನ್ನು ಯಾರು ತಡೆದು ನಿಲ್ಲಿಸೋಕೆ ಆಗಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಳೆಯಿಂದ ಬಹಳ ಅನಾಹುತ ಆಗಿದೆ. ಈ ಬಗ್ಗೆ ಅಧಿಕಾರಿಗಳು ಕಳೆದ 24 ಗಂಟೆಗಳಿಂದ ಕೆಲಸ ಮಾಡುತ್ತಿದ್ದಾರೆ ಹಾಗೂ ಮಾಹಿತಿಯನ್ನು ನೀಡಿದ್ದಾರೆ. ನಾನು ಅವರಿಗೆ ಡಿಸ್ಟರ್ಬ್ ಮಾಡಕ್ಕೆ ಇಷ್ಟ ಇಲ್ಲ ಎಂದು ಹೇಳಿದರು.
ನಾವು ಈಗಾಗಲೇ ಕೆಲವರಿಗೆ ಜನರನ್ನು ಬೇರೆಡೆಗೆ ಶಿಫ್ಟ್ ಮಾಡ್ತೀವಿ ಎಂದು ಹೇಳಿದ್ದೆವು ಅದರಂತೆ 64 ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ಕೊಟ್ಟಿದ್ದೇವೆ. ಅಲ್ಲದೇ ಅಪಾರ್ಟ್ ಮೇಂಟ್ ಅನ್ನು ಕ್ಲೋಸ್ ಮಾಡಲು ಹೇಳಿದ್ದೇವೆ ಎಂದು ಡಿಕೆ ಹೇಳಿದರು.
ಡಿಕೆ ಶಿವಕುಮಾರ್ ಕಾಣೆಯಾಗಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ನಾನು ಅವರಿಗೆ ಕಾಣಿಸಿಲ್ಲ ಅಲ್ವಾ.. ನಿಮಗೆ ಕಾಣಿಸಿದ್ದೀನಲ್ಲ ಬಿಟ್ಟಾಕಿ ಎಂದು ಹೇಳಿದರು.
ನಾನು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸೋದು ದೊಡ್ಡದಲ್ಲ ಆದರೆ ನನಗೆ ಪಬ್ಲಿಸಿಟಿ ಬೇಡ, ನಾನು ಇಲ್ಲೇ ಕುಳಿತು ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಯೋಚಿಸುತ್ತೇನೆ ಎಂದರು.
ಇನ್ನು ಚನ್ನಪಟ್ಟಣ ಉಪ ಚುನಾವಣೆಯ ಬಗ್ಗೆ ಮಾತನಾಡಿದ್ದು ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾನು ಕೂಡ ಬೆಳಗ್ಗೆ ಪೇಪರ್ ನಲ್ಲಿ ಓದಿ ಮಾಹಿತಿ ಪಡೆದ ಅಷ್ಟೇ.ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಮೀಟಿಂಗ್ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರು ಪಾರ್ಟಿ ಬಿಟ್ಟು ಬಂದ ಮೇಲೆ ಮಾತನಾಡುತ್ತೇನೆ ಎಂದು ಡಿಕೆ ಹೇಳಿದರು.