ದೊಡ್ಡಬಳ್ಳಾಪುರ: ಕರ್ನಾಟಕ ಮೂರನೇ mini olympicನಲ್ಲಿ ಶ್ರೀ ಸಾಯಿ ಸಾಧನಾ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಚಿನ್ನ ಹಾಗೂ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆಯಿಂದ ಮೂರನೇ ವರ್ಷದ mini olympic ಬೆಂಗಳೂರಿನಲ್ಲಿ ನಡೆಯಿತು.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕೊಡಿಗೇಹಳ್ಳಿಯ ಶ್ರೀ ಸಾಯಿ ಸಾಧನಾ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಕೃತ್ ಹೆಚ್‌ವಿ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ.
mini Olympicsನಲ್ಲಿ ಉತ್ತಮ ಸಾಧನೆ ಮಾಡಿ ದೊಡ್ಡಬಳ್ಳಾಪುರ ತಾಲೂಕು, ಶಾಲೆ ಹಾಗೂ ಪೋಷಕರ ಕೀರ್ತಿ ಬೆಳಗಿ್ ಸಕೃತ್ ಅವರಿಗೆ ಶ್ರೀ ಸಾಯಿ ಸಾಧನ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಮಧು ಎಸ್‌ಪಿ, ಕಾರ್ಯದರ್ಶಿ ಸತೀಶ್ ಕೆಎನ್ ಹಾಗೂ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.