ಬೆಂಗಳೂರು: ಕೋಟ್ಯಾಂತರ ಭಕ್ತರಿಂದ ಪವಿತ್ರಾ ಸ್ನಾನದ ದೃಶ್ಯಗಳಿಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಸಾಕ್ಷಿಯಾಗುತ್ತಿದೆ. ಆದರೆ ವ್ಯಾಪಕವಾಗಿ ಸುದ್ದಿಯಾಗುತ್ತಿರುವುದು ಮೊನಾಲಿಸಾ (Monalisa) ಎಂಬ ಯುವತಿ.
ಜಾಗತೀಕ ಮಟ್ಟದಲ್ಲಿ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಒಂದಾಗಿರುವ ಮಹಾ ಕುಂಭಮೇಳಕ್ಕೆ ಜನವರಿ 13ರಂದು ಚಾಲನೆ ಸಿಕ್ಕಿದ್ದು, ಏಳು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದೆ.
ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.
ಹುಡುಗಿಯ ವಿಡಿಯೋಗಳು ಸಖತ್ ವೈರಲ್
ಆದರೆ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕುತ್ತು. ಆದರೆ ಮಹಾ ಕುಂಭಮೇಳದಲ್ಲಿ ಮಣಿಗಳ ಸರ ಮಾರುವ ಹುಡುಗಿಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಖಾಸಗಿ ಸುದ್ದಿವಾಹಿನಿಗಳು ಬೆನ್ನಿಗೆ ಬಿದ್ದು ವರದಿ ಮಾಡುತ್ತಿವೆ.. ಒಟ್ಟಾರೆ ಮಾಹಾ ಕುಂಬ ಮೇಳದಲ್ಲಿ ಆ ಯುವತಿ ಸದ್ಯ ಟ್ರೆಂಡಿಂಗ್‌ನಲ್ಲಿದ್ದಾಳೆ.
ಮಹಾ ಕುಂಭಮೇಳದಲ್ಲಿ ಮಣಿಗಳ ಸರಗಳನ್ನು ಮಾರುತ್ತಿರುವ ಈ ಹುಡುಗಿಯ ಹೆಸರು ಮೊನಾಲಿಸಾ ಅಂತೆ. ಮೊನಾಲಿಸಾ ಹಾಗೂ ಆಕೆಯ ತಂಗಿ ಮಹಾ ಕುಂಭಮೇಳ ಮಾತ್ರವಲ್ಲ ಎಲ್ಲಿ ಜನ ದಟ್ಟಣೆ ಇರುತ್ತದೆಯೋ ಅಲ್ಲಿ ಮಣಿ ಸರಗಳನ್ನು, ಹೂವುಗಳನ್ನು ಮಾರಿ ತಮ್ಮ ಜೀವನ ನಡೆಸುತ್ತಿದ್ದಾರಂತೆ.

ನೋಡಲು ಬಹು ಆಕರ್ಷಕವಾಗಿರುವ ಮೊನಾಲಿಸಾ ತಮ್ಮ ನಗು ಮುಖದಿಂದಲೇ ಎಲ್ಲರನ್ನೂ ಮಾತನಾಡಿಸಿ ಮಣಿಗಳ ಸರಗಳು ಹಾಗೂ ರುದ್ರಾಕ್ಷಿ ಸರಗಳ ಮಾರಾಟ ಮಾಡುತ್ತಿದ್ದಾರೆ.
ಸದ್ಯ ಈಕೆಯ ಹಲವು ವಿಡಿಯೋಗಳು ವೈರಲ್ ಆಗುತ್ತಿದ್ದು, ಆಕೆಯ ಹಿಂದೆ ಬಿದ್ದು, ಕಾಡಿ, ಬೆನ್ನತ್ತಿರುವ ಕೆಲ ಖಾಸಗಿ ಸುದ್ದಿವಾಹಿನಿ, ಯೂಟ್ಯೂಬ್ರ್ಸ್ ವರ್ತನೆ ಕುರಿತು ವ್ಯಾಪಕ ಟೀಕೆಗೆ ಗುರಿಯಾಗಿದೆ.
ರಾಜಘಟ್ಟರವಿ ಬೇಸರ
ಈ ಕುರಿತು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಕೂಡ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್ ನಲ್ಲಿ ಈ ಬೆಳವಣಿಗೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ಇವತ್ತಿನ ನಮ್ಮ ಮನಸ್ಥಿತಿ ? ನಾವು ಹೇಗೆ ಸೂಕ್ಷ್ಮತೆಯನ್ನು ಕಳೆದುಕೊಂಡು ವರ್ತಿಸುತ್ತಿದ್ದೇವೆ ? ಎಂದು ಪ್ರಶ್ನಿಸಿದ್ದಾರೆ.
ಮಣಿ ಮಾರುವ ಯುವತಿ ಮೊನಾಲಿಸಾ ಫೋಟೋ ಬಳಸಿ, ನಮ್ಮ ಆದ್ಯತೆ ಯಾವುದು..? ಎಲ್ಲಿ ಯಾವುದು ಗುರುತಿಸಲ್ಪಡ ಬೇಕಿತ್ತು..? ಯಾವ ವಿಚಾರದ ಬಗ್ಗೆ ಚರ್ಚೆಯಾಗ ಬೇಕಿತ್ತು..?
ನಮ್ಮ ಮಾದ್ಯಮಗಳು, ನಾವು ನಮ್ಮ ಯುವ ಜನಾಂಗ, ನಮ್ಮ ಆಲೋಚನೆಗಳು ಎತ್ತ ಸಾಗುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಈ ಭಾರಿಯ ಕುಂಭಮೇಳ,
ಕೊನೆರು ಹಂಪಿ, ವಿಶ್ವ ಖೋ ಖೋ ಗೆದ್ದ ಹೆಣ್ಣು ಮಕ್ಕಳು ಇವರಿಗೆ (ಮಾದ್ಯಮ) ಕಣ್ಣಿಗೆ ಬೀಳಲಿಲ್ಲ..
ಅರ್ಥ ಆಗುವವರಿಗೆ ಇದಕ್ಕಿಂತ ಹೆಚ್ಚಾಗಿ ಹೇಳಬೇಕಿಲ್ಲ. ಅರ್ಥ ಆಗದವರಿಗೆ ಹೇಳಿ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.