ನವದೆಹಲಿ: ಶನಿವಾರವಷ್ಟೇ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಇಂದು (ಸೋಮವಾರ) ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪ (delhi earthquake) ಜನರು ಆತಂಕಕ್ಕೀಡು ಮಾಡಿದೆ.
ಸೋಮವಾರ ಬೆಳಗ್ಗೆ ದಿಲ್ಲಿ, ನೋಯ್ಯಾ ಗುರುಗ್ರಾಮದಲ್ಲಿ ಬೆಳಗ್ಗೆ 5:30ಕ್ಕೆ ಭೂಕಂಪ ಸಂಭವಿಸಿದ್ದು, ಮನೆಯಲ್ಲಿ ಮಲಗಿದ್ದ ಜನ ಕಂಗಾಲಾಗುವಂತಾಗಿತ್ತು.
ಭೂಕಂಪನದ ದೃಶ್ಯಗಳು ಮನೆಗಳ ಬಳಿ ಹಾಕಲಾಗಿದ್ದ ಸಿಸಿಟಿಯಲ್ಲಿ ಕಂಪನದ ತೀವ್ರತೆ ವಿಡಿಯೋದಲ್ಲಿ ದಾಖಲಾಗಿದೆ.
ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದ್ದು ಮನೆಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ.
ಮನೆಯೊಳಗೆ ವ್ಯಕ್ತಿಯೊಬ್ಬರು ಕಂಪನದ ವಿಡಿಯೋ ರೆಕಾರ್ಡ್ ಮಾಡಿದ್ದು, ಸ್ನಾನಗೃಹದ ಬಾತ್‌ಟಬ್‌ನಿಂದ ನೀರು ಚೆಲ್ಲುತ್ತಿರುವ ದೃಶ್ಯ ಭೂಕಂಪನದ ತೀವ್ರತೆಯನ್ನು ತೋರುತ್ತಿದೆ.
ದಿಲ್ಲಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಭೂಕಂಪದ ಭೀಕರ ವಿಡಿಯೋ ನಿಜಕ್ಕೂ ಬೆಚ್ಚಿಬೀಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಒತ್ತಡವನ್ನು ನಿಭಾಯಿಸಿ ಶಾಂತವಾಗಿರುವುದು ಬಹಳ ಮುಖ್ಯ ಎಂದು ಮೋದಿ ಬರೆದಿದ್ದಾರೆ.
ತಜ್ಞರ ತಂಡ ಪರಿಸ್ಥಿತಿಯನ್ನು ತೀಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ಎದುರಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ ಎಂದಿದ್ದಾರೆ.
ಯಾರು ಕೂಡ ದೃತಿಗೆಡಬೇಡಿ. ಎಲ್ಲರೂ ಶಾಂತವಾಗಿರುವಂತೆ ಪಿಎಂ ಮೋದಿ ಕರೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಎಲ್ಲರೂ ಆತ್ಮವಿಶ್ವಾಸ ಇಟ್ಟುಕೊಳ್ಳಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ನಿಮ್ಮ ಜತೆ ಸರ್ಕಾರ ಇರಲಿದೆ ಎಂದು ಸಾಂತ್ವನ ಹೇಳಿದ್ದಾರೆ.