ಬಿಜೋರ್(Harithalekhani): ಕರ್ತವ್ಯದಲ್ಲಿದ್ದ ಪೊಲೀಸ್ (Police) ಪೇದೆಯೊಬ್ಬ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿರುವ ಘಟನೆ ಉತ್ತರ ಪ್ರದೇಶದ (UP) ಬಿಜೋರ್ನಲ್ಲಿ ನಡೆದಿದೆ.
ಕೊಟ್ಟಾಲಿ ಪೊಲೀಸ್ ಠಾಣೆಯ ಜಾಜಿ ಚೌಕ್ ಬಿಜೆರ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾರೆ.
ಸರಿಯಾಗಿ ನಿಲ್ಲಲೂ ಸಾಧ್ಯವಾಗದೆ ರಸ್ತೆ ಮೇಲೆ ಒದ್ದಾಡುತ್ತಿದ್ದದನ್ನ ಕಂಡ ಸ್ಥಳೀಯರು ಮತ್ತು ಟ್ರಾಫಿಕ್ ಪೊಲೀಸ್ ಆತನನ್ನ ಪಕ್ಕಕ್ಕೆ ಕರೆತಂದಿದ್ದಾರೆ.
ಹೀಗೆ ಕುಡಿದ ಮತ್ತಿನಲ್ಲಿ ಒಂದು ವೇಳೆ ರೈಫಲ್ನಿಂದ ಗುಂಡು ಸಿಡಿದು ಯಾರಿಗಾದ್ರೂ ಅಪಾಯವಾಗಿದೆ ಯಾರು ಹೊಣೆ ಅಂತ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ಕಾನ್ಸ್ಟೆಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
A highly intoxicated cop with a Firearm!
— Manish RJ (@mrjethwani_) April 18, 2025
It’s an extremely dangerous condition of the (G)uttar Pradesh police under the failed leadership of Yogi govt.
📍Bijnor, UP pic.twitter.com/akhc4xOBoA