ಬೆಂಗಳೂರು: ರಾಜ್ಯದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬೇಕಾದಷ್ಟು ಸಮಸ್ಯೆಗಳಿವೆ. ಆದರೆ ವಿರೋಧ ಪಕ್ಷದ ನಾಯಕರು (R Ashoka) ಆ ಕುರಿತು ದನಿ ಎತ್ತದೆ ಕ್ಷುಲ್ಲಕ ವಿಚಾರಗಳನ್ನು ಪ್ರಶ್ನೆ ಮಾಡಿ ಸುದ್ದಿಯಾಗುತ್ತಿದ್ದಾರೆ ಎಂಬ ಆರೋಪ ರಾಜ್ಯದ ಜನರದ್ದಾಗಿದೆ.
ಹೌದು ಈ ಅಂತದ್ದೇ ಆರೋಪಕ್ಕೆ ಸಂಬಂಧಿಸಿದ ವಿಚಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ಬತ್ತಳಿಕೆಯಿಂದ ಬಂದಿದೆ.
ವಿಷಯ ಏನಪ್ಪಾ ಅಂದರೆ, ನಿನ್ನೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜನ್ಮದಿನ. ಆದರೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶುಭಕೋರಿ ಟ್ವಿಟ್ ಮಾಡಿಲ್ಲ ಎಂಬುದು ವಿಪಕ್ಷ ನಾಯಕನ ತಗಾದೆ.
ಈ ಕುರಿತು ಟ್ವಿಟ್ ಮಾಡಿರುವ ಆರ್ ಅಶೋಕ್, ಸಿಎಂ ಸಿದ್ದರಾಮಯ್ಯ (Cmsiddaramaiah) ಹಾಗು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನಡುವಿನ ಸಂಬಂಧ ಚೆನ್ನಾಗಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ.
ಆದರೆ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಿದ್ದರಾಮಯ್ಯನವರು ಕನಿಷ್ಠ ಪಕ್ಷ ಒಂದು ಟ್ವೀಟ್ ಕೂಡ ಮಾಡದಷ್ಟು ಹದಗೆಟ್ಟಿದೆ ಎಂದು ಗೊತ್ತಿರಲಿಲ್ಲ.
ಒಬ್ಬರ ಮುಖ ಒಬ್ಬರು ನೋಡಲಾಗದ ಈ ನಾಯಕರು ರಾಜ್ಯವನ್ನು ಹೇಗೆ ಮುನ್ನಡೆಸುತ್ತಾರೆ? ಕನ್ನಡಿಗರು ಕರ್ನಾಟಕ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದಿದ್ದಾರೆ.
ಇನ್ನೂ ಈ ಟ್ವಿಟ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
ಕರ್ನಾಟಕದಲ್ಲಿ ವಿರೋಧ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ, ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ, ಯಾವುದೇ ಸರಕಾರಿ ನೇಮಕಾತಿ ಇಲ್ಲಾ ಇದರ ಬಗ್ಗೆ ವಿರೋಧ ಪಕ್ಷ ಧ್ವನಿ ಎತ್ತುತ್ತಿಲ್ಲ.
ಅಯ್ಯೋ ಅಶೋಕ ಇದನೆಲ್ಲ ಗಮನಿಸುವ ನಿಮಗೆ ಮಾತು ಬಾರದ ಕಿವಿಯೂ ಕೇಳಿಸದ ಅಪ್ರಾಪ್ತ ಬಾಲಕಿಯನ್ನು ಬಲತ್ಕಾರ ಮಾಡಿ ಕೊಂದು ಬಿಸಾಕಿದನ್ನು ಕಾಣಲೇ ಇಲ್ಲವೇ
ಅಥವಾ ಕಂಡು ಶವ ರಾಜಕೀಯ ಮಾಡಲು ಅವಕಾಶ ತಪ್ಪಿತು ಎಂಬ ಬೇಸರವೇ?.
ಅಣ್ಣ ಟ್ವಿಟ್ಟರ್ ಹ್ಯಾಂಡಲ್ ಮಾಡ್ತಿರೋವ್ನ ಮೊದ್ಲು ಚೇಂಜ್ ಮಾಡಿ.. ಚೈಲ್ಡ್ ತರ ಇದಕ್ಕೆ ಟ್ವೀಟ್ ಮಾಡ್ಕೊಂಡು ಏನಣ್ಣ ಇದೆಲ್ಲ..
ಆದರೆ ವಿರೋಧ ಪಕ್ಷದ ನಾಯಕರು ಇದನ್ನೆಲ್ಲ ಗಮನಿಸುವಷ್ಟು ನಿರುದ್ಯೋಗಿಗಳು ಅಂತ ಈಗಲೇ ಗೊತ್ತಾಗಿದ್ದು..
ಸ್ವಾಮಿ ಪರ್ಸನಲ್ ಬಿಟ್ಟು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ. ನೀವು ವಿರೋಧ ಪಕ್ಷದ ನಾಯಕರಾಗಿರುವುದು ವಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಅಲ್ಲ. ನಿಮ್ಮ ಪದವಿಯ ಬಗ್ಗೆ ಜ್ಞಾಪಕ ಇರಲಿ ಮಹಾಸ್ವಾಮಿಗಳೇ.
ನೀನು ಒಬ್ಬ ವಿರೋಧ ಪಕ್ಷದ ನಾಯಕನಾಗಿ ಇರೋದೇ ಒಂದು ಕರ್ಮ 🤦♂️🤦♂️🤦♂️
ರಾಜ್ಯದಲ್ಲಿ ನೂರಾರು ಸಮಸ್ಯೆಗಳು ಇರುವಾಗ ಇದು ಬೇಕಾ…. ಚಿಕ್ಕ ಮಕ್ಕಳು ತರ ಟ್ವೀಟ್ ಮಾಡ್ಕೊಂಡು ಅವನು ವಿಶ್ ಮಾಡಿಲ್ಲಇವನು ವಿಶ್ ಮಾಡಿಲ್ಲ ಅಂತ ಹೇಳ್ತಿಯಲ್ಲ 😂😂😂 ನಾಲಾಯಕ್ ವಿರೋಧ ಪಕ್ಷದ ನಾಯಕ 🤦♂️.
ರಾಜ್ಯದ ಅಭಿವೃದ್ಧಿಗಾಗಿ ಏನಾದರೂ ಮಾಡಿ ಅಂದ್ರೆ, ಟ್ವೀಟ್ ಮಾಡಿಕೊಂಡು ಕಾಲಹರಣ ಮಾಡುವ ನಾಲಯಕ ರಾಜಕಾರಣದ ವ್ಯಕ್ತಿಗಳು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂಬಂಧ ನಾನೊಂದು ತೀರ, ನೀನೊಂದು ತೀರ ಎಂಬಂತಾಗಿದೆ.
ಪರ ಚಿಂತೆ ಏಕೆ ಅಯ್ಯ
ಪರ ಚಿಂತೆ ಏಕೆ
ನಿಮ್ದ ಅದ್ಜೂಸ್ಟ್ಮೆಂಟ್ ರಾಜಕೀಯ
ಮತ್ತೆ ನಿಮ್ಮ ಒಳ ಜಗಳ ಎಲ್ಲರಿಗೂ ಗೊತ್ತಿದ ಮೇಲೆ
ಅಚಾರವಿಲ್ಲದ ನಾಲ್ಗೆ
ತೇಗಿ ಬೇಡಿ.
DK ge yenu problem illa, nimge yenro problem🤣.
Idu ondhu vishya na?🤦🏻♂️🤦🏻♂️.
Lolll ಏನ್ರೀ ನಾಚಿಕೆ ಆಗಲ್ವಾ ವಿಪಕ್ಷದ ನಾಯಕನಾಗಿ ಈತರ ಟ್ವೀಟ್ ಮಾಡೋದಕ್ಕೆ?.. ನೇರವಾಗಿ ಬೇಟಿ ಮಾಡಿ ಶುಭಾಶಯ ತಿಳಿಸಿರ್ತಾರೆ ಬಿಡ್ರೀ .. ಮೊದಲು ವಿಪಕ್ಷ ಸ್ಥಾನದಲ್ಲಿ ಕೂತು ಜವಾಬ್ದಾರಿ ವ್ಯಕ್ತಿಯಾಗಿ ನಡೆದುಕೊಳ್ಳಿ… ಒಳಮೀಸಲಾತಿ,ಹೊಸ ನೇಮಕಾತಿ,ನಿರುದ್ಯೋಗ, ರಸ್ತೆ.. ಈತರ ನೂರಾರು ವಿಷಯಗಳಿವೆ ಅವನ್ನ ಪ್ರಶ್ನೆ ಮಾಡಿ…